ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಬೇಬಿ ಡೇ ಕೇರ್‌ ಬಗ್ಗೆ ಹೆತ್ತವರಿಗೆ ಏನ್‌ ಗೊತ್ತಿರಬೇಕು?

ಬೇಬಿ ಡೇ ಕೇರ್‌ ಬಗ್ಗೆ ಹೆತ್ತವರಿಗೆ ಏನ್‌ ಗೊತ್ತಿರಬೇಕು?

 ಕೆಲಸಕ್ಕೆ ಹೋಗೋ ಕೆಲವು ಹೆತ್ತವರು ತಮ್ಮ ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸೋಕ್ಕೆ ನಿರ್ಣಯಿಸ್ತಾರೆ. ಇದು ಕ್ಲಾಸ್‌ ರೂಮ್‌ ತರ ಇರುತ್ತೆ. ನೀವು ನಿಮ್ಮ ಮಗುವನ್ನ ಬೇಬಿ ಡೇ ಕೇರ್‌ ಸೆಂಟರ್‌ಗೆ ಕಳಿಸ್ತೀರಾ?

 ನೀವೇ ಕೇಳ್ಕೊಬೇಕಾದ ಪ್ರಶ್ನೆ

 ನನ್ನ ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸಿದ್ರೆ ನನ್ನ ಮತ್ತು ನನ್ನ ಮಗುವಿನ ಸಂಬಂಧದ ಮೇಲೆ ಏನಾದ್ರೂ ಪರಿಣಾಮ ಬೀಳುತ್ತಾ? ಹೌದು. ಮೊದಲ ವರ್ಷದಲ್ಲಿ ಮಗುವಿನ ಮೆದುಳು ಬೇಗ ಬೆಳವಣಿಗೆ ಆಗುತ್ತೆ. ಈ ಸಮಯದಲ್ಲಿ ಬೇರೆಯವರ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀಳುತ್ತೆ. ಈ ಮುಖ್ಯವಾದ ಸಮಯದಲ್ಲಿ ನಿಮ್ಮಿಂದ ಎಷ್ಟು ಆಗುತ್ತೋ ಅಷ್ಟು ನಿಮ್ಮ ಮಗುವಿನ ಜೊತೆ ಸಮಯ ಕಳೆಯಿರಿ.—ಧರ್ಮೋಪದೇಶಕಾಂಡ 6:6, 7.

  •    ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸೋವಾಗ ಮಗು ಜೊತೆ ಸಂಬಂಧವನ್ನ ಹೇಗೆ ಹೆಚ್ಚು ಬಲಗೊಳ್ಳಿಸೋದು ಅನ್ನೋದ್ರ ಬಗ್ಗೆ ಹೆತ್ತವರು ಯೋಚನೆ ಮಾಡಬೇಕು.

 ನಿಮಗಿಂತ ಬೇಬಿ ಡೇ ಕೇರ್‌ ಸೆಂಟರ್‌ ನಿಮ್ಮ ಮಗುವಿನ ಮೇಲೆ ಹೆಚ್ಚು ಪರಿಣಾಮ ಬೀಳುತ್ತಾ? ಹೌದು. “ಹೆಚ್ಚು ಸಮಯ ಮಗು ಬೇರೆ ಮಕ್ಕಳ ಜೊತೆ ಕಳಿಯೋದ್ರಿಂದ ಅವರ ಪರಿಣಾಮ ಮಗು ಮೇಲೆ ಬೀಳುತ್ತೆ” ಅಂತ ಹೋಲ್ಡ್‌ ಆನ್‌ ಟು ಯುವರ್‌ ಕಿಡ್ಸ್‌ ಅನ್ನೋ ಪುಸ್ತಕ ಹೇಳುತ್ತೆ.

  •    ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸಿದ್ರೆ ಆ ಮಗುವಿನ ಜೀವನದಲ್ಲಿ ನಾನೊಬ್ಬ ಮುಖ್ಯ ವ್ಯಕ್ತಿಯಾಗಿ ಇರ್ತೀನಾ ಅಂತ ಹೆತ್ತವರು ಯೋಚಿಸಬೇಕು.

 ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸಿದ್ರೆ ಮಗು ನಂತ್ರ ಶಾಲೆಗೆ ಬೇಕಾದದ್ದನ್ನ ಕಲಿಯೋಕೆ ಆಗುತ್ತಾ? ಕೆಲವರು ಹೌದು ಅಂತಾರೆ. ಇನ್ನು ಕೆಲವರು ಬೇಬಿ ಡೇ ಕೇರ್‌ ಸೆಂಟರ್‌ನಿಂದ ಮಗು ಮುಂದೆ ಶಾಲೆಯಲ್ಲಿ ಕಲಿಯೋಕೆ ಅಲ್ಪ-ಸ್ವಲ್ಪನೂ ಸಹಾಯ ಆಗಲ್ಲ ಅಂತ ಹೇಳ್ತಾರೆ. ವಿಷ್ಯ ಏನೇ ಇದ್ರೂ, ಮಕ್ಕಳ ಮನಶ್ಶಾಸ್ತ್ರಜ್ಞ ಪೆನೆಲೋಪ್‌ ಲೀಚ್‌ ಹೀಗೆ ಬರಿತಾರೆ: “ಮಕ್ಕಳು ಸ್ಕೂಲಲ್ಲಿ ಏನ್‌ ಕಲಿತ್ತಾರೋ ಅದ್ರಿಂದ ಮಾತ್ರ ಅವ್ರ ಜೀವನದಲ್ಲಿ ಪ್ರಯೋಜನ ಆಗುತ್ತೆ ಅಂತ ನಂಬಬೇಡಿ. ಅಲ್ಲದೆ, ಅವ್ರು ತುಂಬ ಚಿಕ್ಕವರಿದಾಗಲೇ ಸ್ಕೂಲಿಗೆ ಹೋದ್ರೆ ಒಳ್ಳೇದು ಅಂತ ನಂಬಬೇಡಿ. ಹಾಗೆ ಏನಾದ್ರು ನಂಬಿ ಅಲ್ಲಿಗೆ ಕಳಿಸಿದ್ರೆ ನಿಮ್ಮ ಮಕ್ಕಳಿಗೆ ಚಿಕ್ಕವರಿಂದ ನೀವೇನು ಕಲಿಸ್ತಾ ಬಂದರೋ ಅದನ್ನ ನೀವೇ ಕಡಿಮೆ ಅಂದಾಜು ಮಾಡಿದ ಹಾಗೆ.”

  •    ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸೋದ್ರಿಂದ ಪ್ರಯೋಜನ ಇದ್ಯಾ ಅಥವಾ ಕಳಿಸೋದು ಅಗತ್ಯನಾ ಅಂತ ಹೆತ್ತವರು ಯೋಚಿಸಬೇಕು.

 ನೀವು ಅಥವಾ ನಿಮ್ಮ ಸಂಗಾತಿ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದು ಮಗುವಿನ ಜೊತೆ ಸಮಯ ಕಳೆಯೋಕೆ ಆಗುತ್ತಾ? ಕೆಲವೊಂದು ಸಲ, ಜಾಸ್ತಿ ದುಡ್ಡು ಮಾಡೋಕೆ ಅಪ್ಪ-ಅಮ್ಮ ದುಡಿಯೋಕೆ ಹೋಗ್ತಾರೆ. ಈ ಹಣದಿಂದ ಮಕ್ಕಳಿಗೆ ಎಷ್ಟು ಪ್ರಯೋಜನ ಆಗುತ್ತೆ?

  •    ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸೋಕ್ಕೆ ಯೋಚನೆ ಮಾಡ್ತಿರೋ ಹೆತ್ತವರು ಖರ್ಚನ್ನ ಕಡಿಮೆ ಮಾಡೋಕೆ ಆಗುತ್ತಾ ಅಂತ ಯೋಚನೆ ಮಾಡಬೇಕು. ಆಗ ಇಬ್ಬರಲ್ಲಿ ಒಬ್ಬರು ಮನೆಯಲ್ಲಿ ಇರೋಕೆ ಆಗುತ್ತೆ.

 ನೀವು ನಿಮ್ಮ ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸೋ ಮುಂಚೆನೇ ಆದ್ರಿಂದ ಆಗೋ ಪ್ರಯೋಜನ ಮತ್ತು ನಷ್ಟಗಳ ಬಗ್ಗೆ ಸರಿಯಾಗಿ ಯೋಚನೆ ಮಾಡಬೇಕು. ಈ ತರ ಯೋಚನೆ ಮಾಡಿದ ಮೇಲೂ ನಿಮ್ಮ ಕುಟುಂಬಕ್ಕೆ ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸೋದೇ ಸರಿ ಅಂತ ಅನಿಸುತ್ತಾ?

 ನೀವೇನು ಮಾಡಬಹುದು?

 “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 14:15) ಯಾವುದೇ ರೀತಿಯ ಡೇ ಕೇರ್‌ ಸೆಂಟರ್‌ಗಳ ಬಗ್ಗೆ ಯೋಚನೆ ಮಾಡೋ ಮೊದಲು ಈ ತತ್ವವನ್ನ ಮನಸ್ಸಲ್ಲಿಟ್ಟು ಚೆನ್ನಾಗಿ ಯೋಚಿಸಿ.

 ನಿಮ್ಮ ಆಯ್ಕೆಯಿಂದ ಕಲಿಯಿರಿ

  •    ಕೆಲವು ಹೆತ್ತವರು ಒಬ್ಬರು ಅಥವಾ ಸ್ವಲ್ಪ ಜನ ನೋಡ್ಕೊಳ್ಳೋಕೆ ಇರೋ ಮತ್ತು ಕೆಲವು ಮಕ್ಕಳು ಇರೋ ಮನೆಗಳಂತ ಡೇ ಕೇರ್‌ಗಳನ್ನ ಆರಿಸ್ಕೊಳ್ತಾರೆ.

  •    ಇನ್ನು ಕೆಲವು ಹೆತ್ತವರು ಮಗುವನ್ನ ಸಂಬಂಧಿಕರ ಹತ್ರ, ತಮ್ಮ ಮನೆಯಲ್ಲಿದ್ದು ಮಕ್ಕಳನ್ನ ನೋಡ್ಕೊಳ್ಳೋರ ಹತ್ರ ಅಥವಾ ಬೇಬಿ ಸಿಟಿಂಗ್‌ನಲ್ಲಿ ಬಿಡ್ತಾರೆ.

 ಈ ಎಲ್ಲ ಆಯ್ಕೆಗಳಲ್ಲಿ ಪ್ರಯೋಜನ ಮತ್ತು ನಷ್ಟಗಳಿವೆ. ಈಗಾಗಲೇ ಬೇರೆ-ಬೇರೆ ಡೇ ಕೇರ್‌ ಸೆಂಟರ್‌ಗೆ ಮಕ್ಕಳನ್ನ ಕಳಿಸಿದ ಹೆತ್ತವರ ಜೊತೆ ಮಾತಾಡಿ ನೋಡಿ. “ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ” ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 13:10.

 ಒಂದುವೇಳೆ ನೀವು ನಿಮ್ಮ ಮಗುವನ್ನ ಡೇ ಕೇರ್‌ ಸೆಂಟರ್‌ಗೆ ಕಳಿಸೋಕೆ ನಿರ್ಣಯಿಸಿದ್ರೆ ಆಗೇನು? ಆಗ . . .

 ಈ ಸೌಲಭ್ಯದ ಬಗ್ಗೆ ತಿಳ್ಕೊಳ್ಳಿ

  •    ಅದಕ್ಕೆ ಲೈಸೆನ್ಸ್‌ ಇದ್ಯಾ ಅಥವಾ ಅಲ್ಲಿ ಎಲ್ಲಾ ಕಾನೂನಿನ ಪ್ರಕಾರ ಇದ್ಯಾ? ಅದಕ್ಕೆ ಒಳ್ಳೇ ಹೆಸ್ರು ಇದ್ಯಾ?

  •    ಅಲ್ಲಿ ಸ್ವಚ್ಛವಾಗಿ, ಸುರಕ್ಷಿತವಾಗಿ ಇದ್ಯಾ?

  •    ಅಲ್ಲಿ ನಿಮ್ಮ ಮಕ್ಕಳು ಏನ್‌ ಮಾಡ್ತಾರೆ? a

 ಮಗು ನೋಡ್ಕೊಳ್ಳೋರ ಬಗ್ಗೆ ತಿಳ್ಕೊಳ್ಳಿ

  •    ಅವರಿಗೆ ಯಾವ ರೀತಿಯ ತರಬೇತಿ ಸಿಕ್ಕಿದೆ? ಉದಾಹರಣೆಗೆ, ಅಲ್ಲಿ ಇರೋರಿಗೆ ಫಸ್ಟ್‌ ಏಡ್‌, ಸಿ.ಪಿ.ಆರ್‌ (CPR) ಬಗ್ಗೆ ಗೊತ್ತಾ?

  •    ನಿಮ್ಮ ಮಗುವನ್ನ ನೋಡ್ಕೊಳ್ಳೋರು ಈ ಹಿಂದೆ ಯಾವುದಾದ್ರೂ ಕ್ರಿಮಿನಲ್‌ ಕೇಸಲ್ಲಿ ಇದ್ರಾ ಅಂತ ಬೇರೆ ಕಡೆಯಿಂದ ತಿಳ್ಕೊಳ್ಳೋಕೆ ಆಗುತ್ತಾ?

  •    ಅಲ್ಲಿ ಕೆಲಸ ಮಾಡೋರು ಯಾವಾಗ್ಲೂ ಬದಲಾಗ್ತಾ ಇರ್ತಾರಾ? ಹಾಗಾದ್ರೆ ಹೊಸದಾಗಿ ಬರೋರ ಹತ್ರ ಮಗು ಯಾವಾಗ್ಲೂ ಹೊಂದ್ಕೊಳ್ತಾ ಇರಬೇಕಾಗುತ್ತೆ.

  •    ಮಗು ನೋಡ್ಕೊಳ್ಳೋರು ಎಷ್ಟು ಮಕ್ಕಳನ್ನ ನೋಡ್ಕೊಳ್ತಾರೆ? ಅವರು ತುಂಬ ಮಕ್ಕಳನ್ನ ನೋಡ್ಕೊಂಡ್ರೆ ನಿಮ್ಮ ಮಗುಗೆ ಕಡಿಮೆ ಗಮನಕೊಡ್ತಾರೆ. ನಿಮ್ಮ ಮಗುಗೆ ಎಷ್ಟು ಗಮನಕೊಡಬೇಕು ಅನ್ನೋದು ಆ ಮಗುವಿನ ವಯಸ್ಸು ಮತ್ತು ಸಾಮರ್ಥ್ಯದ ಮೇಲೆ ಹೊಂದ್ಕೊಂಡಿದೆ.

  •    ಮಗು ನೋಡ್ಕೊಳ್ಳೋರು ನಿಮ್ಮ ಅಥವಾ ಅವ್ರ ಚಿಂತೆಗಳ ಬಗ್ಗೆ ಮಾತಾಡೋಕೆ ಮುಂದೆ ಬರ್ತಾರಾ?

a ಉದಾಹರಣೆಗೆ, ಅಲ್ಲಿ ನಿಮ್ಮ ಮಗು ಕಲಿಯೋಕೆ ಅಥವಾ ವ್ಯಾಯಾಮ ಮಾಡೋಕೆ ಏನಾದ್ರೂ ಇದ್ಯಾ ಅಥವಾ ಬರೀ ಟಿವಿ ನೋಡೋಕೆ ಬಿಡ್ತಾರ?