ಮಾಹಿತಿ ಇರುವಲ್ಲಿ ಹೋಗಲು

ದೇವರ ಸರ್ಕಾರ ಭೂಮಿಯಲ್ಲಿ ಯಾವ ಸುಧಾರಣೆ ತರುತ್ತೆ?

ದೇವರ ಸರ್ಕಾರ ಭೂಮಿಯಲ್ಲಿ ಯಾವ ಸುಧಾರಣೆ ತರುತ್ತೆ?

ಬೈಬಲಿನ ಉತ್ತರ

 ದೇವರ ಸರ್ಕಾರ ಭೂಮಿ ಮೇಲಿರೋ ಎಲ್ಲ ಸರ್ಕಾರಗಳನ್ನ ತೆಗೆದುಹಾಕಿ ಭೂಮಿಯನ್ನ ಶಾಶ್ವತವಾಗಿ ಆಳುತ್ತೆ. (ದಾನಿಯೇಲ 2:44; ಪ್ರಕಟನೆ 16:14) ಆಗ, ದೇವರ ಸರ್ಕಾರ ಏನೆಲ್ಲ ಮಾಡುತ್ತೆ ಅಂತ ಬೈಬಲ್‌ ತಿಳಿಸುತ್ತೆ. ಬೈಬಲಿನಲ್ಲಿ ತಿಳಿಸಲಾಗಿರೋ ಸುಧಾರಣೆಗಳು ಯಾವುವು ಅಂತ ಕೆಳಗೆ ಕೊಡಲಾಗಿದೆ . . .

  •   ದೇವರ ಸರ್ಕಾರ ದುಷ್ಟತನವನ್ನ ತೆಗೆದುಹಾಕುತ್ತೆ. “ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”—ಜ್ಞಾನೋಕ್ತಿ 2:22.

  •   ದೇವರ ಸರ್ಕಾರ ಯುದ್ಧಗಳಿಗೆ ಅಂತ್ಯ ಹಾಡುತ್ತೆ. “[ದೇವರು] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.”—ಕೀರ್ತನೆ 46:9.

  •   ದೇವರ ಸರ್ಕಾರ ಭೂಮಿಗೆ ಶಾಂತಿ ಸಮೃದ್ಧಿಯನ್ನು ತರುತ್ತೆ. “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:4.

  •   ದೇವರ ಸರ್ಕಾರ ಭೂಮಿಯನ್ನ ಸುಂದರ ತೋಟವಾಗಿ ಮಾಡುತ್ತೆ. “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವುದು.”—ಯೆಶಾಯ 35:1.

  •   ದೇವರ ಆಳ್ವಿಕೆಯಲ್ಲಿ ಎಲ್ಲರಿಗೂ ಖುಷಿ ಕೊಡೋ ಕೆಲ್ಸ ಇರುತ್ತೆ. “ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು.”—ಯೆಶಾಯ 65:21-23.

  •   ದೇವರ ಸರ್ಕಾರ ಕಾಯಿಲೆಗಳನ್ನ ತೆಗೆದುಹಾಕುತ್ತೆ. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.

  •   ದೇವರ ಸರ್ಕಾರದಲ್ಲಿ ಯಾರೂ ಮುದುಕರಾಗಲ್ಲ. “ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.”—ಯೋಬ 33:25.

  •   ದೇವರ ಸರ್ಕಾರದಲ್ಲಿ ಸತ್ತವರೆಲ್ಲ ಮತ್ತೆ ಜೀವಂತವಾಗಿ ಎದ್ದು ಬರ್ತಾರೆ. “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಅವನ ಸ್ವರವನ್ನು ಕೇಳಿ ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29.