ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಯೆಶಾಯ 41:10—“ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ”

ಯೆಶಾಯ 41:10—“ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ”

 “ಹೆದರಬೇಡ. ಯಾಕಂದ್ರೆ ನಾನು ನಿನ್ನ ಜೊತೆ ಇದ್ದೀನಿ. ಕಳವಳಪಡಬೇಡ. ಯಾಕಂದ್ರೆ ನಾನು ನಿನ್ನ ದೇವರು. ನಾನು ನಿನ್ನನ್ನ ಬಲಪಡಿಸ್ತೀನಿ. ಹೌದು, ನಾನು ನಿನಗೆ ಸಹಾಯ ಮಾಡ್ತೀನಿ, ನಾನು ನಿನ್ನನ್ನ ನನ್ನ ಬಲಗೈಯಿಂದ ಗಟ್ಟಿಯಾಗಿ ಹಿಡ್ಕೊಳ್ತೀನಿ.”—ಯೆಶಾಯ 41:10, ಹೊಸ ಲೋಕ ಭಾಷಾಂತರ.

 “ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.”—ಯೆಶಾಯ 41:10, ಸತ್ಯವೇದವು.

ಯೆಶಾಯ 41:10—ಅರ್ಥ

 ಈ ಮಾತುಗಳ ಮೂಲಕ ಯೆಹೋವ a ದೇವರು ತನ್ನನ್ನ ನಿಷ್ಠೆಯಿಂದ ಆರಾಧಿಸುವವರಿಗೆ ಏನೇ ಕಷ್ಟ ಇದ್ರೂ, ಎಷ್ಟೇ ಕಷ್ಟ ಇದ್ರೂ ಸಹಾಯ ಮಾಡ್ತೀನಿ ಅಂತ ಭರವಸೆ ತುಂಬುತ್ತಿದ್ದಾನೆ.

 “ನಾನು ನಿನ್ನ ಜೊತೆ ಇದ್ದೀನಿ.” ತನ್ನನ್ನ ಆರಾಧಿಸೋ ವ್ಯಕ್ತಿ ಯಾಕೆ ಹೆದರಬಾರದು ಅಂತ ಯೆಹೋವ ದೇವರು ಇಲ್ಲಿ ಹೇಳ್ತಿದ್ದಾನೆ. ಯಾಕೆಂದ್ರೆ ಅವನು ಒಂಟಿಯಲ್ಲ, ದೇವರೇ ಅವನ ಜೊತೆ ಇದ್ದಾನೆ. ಹೇಗೆ? ಅವನು ಏನೇನು ಕಷ್ಟ ಅನುಭವಿಸ್ತಿದ್ದಾನೆಂದು ದೇವರು ನೋಡ್ತಿದ್ದಾನೆ. ಅವನ ಪ್ರಾರ್ಥನೆಗಳನ್ನು ಕೇಳಿಸಿಕೊಳ್ತಿದ್ದಾನೆ.—ಕೀರ್ತನೆ 34:15; 1 ಪೇತ್ರ 3:12.

 “ನಾನು ನಿನ್ನ ದೇವರು.” ಈ ಮಾತು ಹೇಳಿ ಯೆಹೋವನು ತನ್ನ ಆರಾಧಕರನ್ನು ಸಮಾಧಾನ ಮಾಡ್ತಿದ್ದಾನೆ. ಅವರ ಸನ್ನಿವೇಶ ಬದಲಾದ್ರೂ ಇನ್ನೂ ಆತನೇ ಅವರ ದೇವರು, ಅವರು ಇನ್ನೂ ಆತನ ಆರಾಧಕರೇ ಅಂತ ನೆನಪಿಸ್ತಿದ್ದಾನೆ. ಅವರು ಎಂಥದ್ದೇ ಸನ್ನಿವೇಶದಲ್ಲಿ ಇರಲಿ ಆತನು ಸಹಾಯ ಮಾಡೇ ಮಾಡ್ತಾನೆ.—ಕೀರ್ತನೆ 118:6; ರೋಮನ್ನರಿಗೆ 8:32; ಇಬ್ರಿಯ 13:6.

 “ನಾನು ನಿನ್ನನ್ನ ಬಲಪಡಿಸ್ತೀನಿ. ಹೌದು, ನಾನು ನಿನಗೆ ಸಹಾಯ ಮಾಡ್ತೀನಿ, ನಾನು ನಿನ್ನನ್ನ ನನ್ನ ಬಲಗೈಯಿಂದ ಗಟ್ಟಿಯಾಗಿ ಹಿಡ್ಕೊಳ್ತೀನಿ.” ಇಲ್ಲಿ ಯೆಹೋವನು ತನ್ನ ಜನರಿಗೆ ಖಂಡಿತ ಬೆಂಬಲ ಕೊಡುತ್ತಾನೆ ಅನ್ನೋ ವಿಷ್ಯವನ್ನು ಮೂರು ವಿಧಗಳಲ್ಲಿ ಒತ್ತಿ ಹೇಳುತ್ತಿದ್ದಾನೆ. ತನ್ನ ಜನರಿಗೆ ಸಹಾಯ ಬೇಕಿದ್ದಾಗ ಆತನು ಏನು ಮಾಡ್ತಾನೆ ಅಂತ ಕೂಡ ವರ್ಣಿಸಿದ್ದಾನೆ. ಹೇಗಂದ್ರೆ ಯಾರಾದ್ರೂ ಬಿದ್ದರೆ ದೇವರು ತನ್ನ ಬಲಗೈಯನ್ನು ಚಾಚಿ ಅವರನ್ನ ಗಟ್ಟಿಯಾಗಿ ಹಿಡಿದು ಮೇಲೆಕ್ಕೆ ಎಳಿತಾನೆ.—ಯೆಶಾಯ 41:13.

 ದೇವರು ತನ್ನ ಜನರಿಗೆ ಮುಖ್ಯವಾಗಿ ತನ್ನ ಗ್ರಂಥವಾದ ಬೈಬಲಿನ ಮೂಲಕ ಸಹಾಯ ಮಾಡ್ತಾನೆ, ಬಲಪಡಿಸ್ತಾನೆ. (ಯೆಹೋಶುವ 1:8; ಇಬ್ರಿಯ 4:12) ಉದಾಹರಣೆಗೆ ಬಡತನ, ಕಾಯಿಲೆ, ನಮಗೆ ತುಂಬ ಇಷ್ಟವಾದವರ ಸಾವು ಇಂಥ ಕಷ್ಟಗಳಲ್ಲಿ ಏನು ಮಾಡಬೇಕು ಅನ್ನೋದರ ಬಗ್ಗೆ ಬೈಬಲ್‌ ಒಳ್ಳೇ ಸಲಹೆ ಕೊಡುತ್ತೆ. (ಜ್ಞಾನೋಕ್ತಿ 2:6, 7) ದೇವರು ತನ್ನ ಪವಿತ್ರ ಶಕ್ತಿ ಅಂದ್ರೆ ಸಕ್ರಿಯ ಶಕ್ತಿಯ ಮೂಲಕ ಸಹ ತನ್ನ ಜನರಿಗೆ ಸಹಾಯ ಮಾಡ್ತಾನೆ. ಇದ್ರಿಂದ ಅವರಿಗೆ ಕಷ್ಟಗಳನ್ನು ತಾಳಿಕೊಳ್ಳಲು, ಸರಿಯಾಗಿ ಯೋಚನೆ ಮಾಡಲು ಬಲ ಸಿಗುತ್ತೆ.—ಯೆಶಾಯ 40:29; ಲೂಕ 11:13.

ಯೆಶಾಯ 41:10—ಸಂದರ್ಭ

 ಯೆಹೋವನು ಈ ಮಾತು ಹೇಳಿದ್ದು ತನಗೆ ನಂಬಿಗಸ್ತರಾಗಿದ್ದ ಯೆಹೂದ್ಯರು ಬಾಬೆಲಿಗೆ ಸೆರೆಯಾಗಿ ಹೋಗೋದಕ್ಕೆ ಮುಂಚೆ. ಈ ಮಾತು ಕೇಳಿ ಅವರಿಗೆ ತುಂಬ ಸಮಾಧಾನವಾಯ್ತು. ಇವರ ಸೆರೆವಾಸದ ಸಮಯ ಮುಗಿಯುವಾಗ ಬಾಬೆಲಿನ ಸುತ್ತಲಿರೋ ದೇಶಗಳನ್ನು ನಾಶ ಮಾಡಲು ಒಬ್ಬ ವಿಜಯಶಾಲಿ ಬರ್ತಾನೆ, ಅವನು ಬಾಬೆಲಿಗೆ ಬೆದರಿಕೆ ಹಾಕ್ತಾನೆ ಅಂತ ಯೆಹೋವನು ಮುಂಚೆನೇ ಹೇಳಿದ್ದನು. (ಯೆಶಾಯ 41:2-4; 44:1-4) ಬಾಬೆಲ್‌ ಮತ್ತು ಸುತ್ತಲಿನ ದೇಶಗಳು ಆ ವಿಜಯಶಾಲಿ ಬಗ್ಗೆ ಕೇಳಿಸಿಕೊಂಡಾಗ ಹೆದರಿ ಗಡಗಡ ನಡುಗುತ್ತವೆ. ಆದ್ರೆ ಯೆಹೂದ್ಯರು ಹೆದರೋ ಅವಶ್ಯಕತೆ ಇರ್ಲಿಲ್ಲ. ಏಕೆಂದ್ರೆ ಯೆಹೋವನು ಅವರನ್ನು ಕಾಪಾಡಲಿಕ್ಕಿದ್ದನು. “ಹೆದರಬೇಡ” “ಹೆದರಬೇಡ” “ಭಯಪಡಬೇಡ” ಅಂತ ಮೂರು ಸಲ ಆತನು ಅವರಿಗೆ ಹೇಳಿ ಧೈರ್ಯ ತುಂಬಿದನು.—ಯೆಶಾಯ 41:5, 6, 10, 13, 14.

 ಯೆಹೋವನು ಯೆಶಾಯ 41:10 ರಲ್ಲಿರೋ ಮಾತನ್ನು ಮೊದಲು ಹೇಳಿದ್ದು ಬಾಬೆಲಿನಲ್ಲಿ ಸೆರೆವಾಸಿಗಳಾಗಿದ್ದ ನಂಬಿಗಸ್ತ ಯೆಹೂದ್ಯರಿಗೆ. ಆದ್ರೂ ತನ್ನೆಲ್ಲ ಜನರಿಗೆ ಈ ಮಾತಿಂದ ಸಮಾಧಾನ ಸಿಗಬೇಕು ಅಂತ ಅದನ್ನು ಇವತ್ತಿನ ತನಕ ಉಳಿಸಿದ್ದಾನೆ. (ಯೆಶಾಯ 40:8; ರೋಮನ್ನರಿಗೆ 15:4) ಆವತ್ತು ಆತನು ತನ್ನ ಜನರಿಗೆ ಹೇಗೆ ಸಹಾಯ ಮಾಡಿದನೋ ಹಾಗೇ ಇವತ್ತೂ ಸಹಾಯ ಮಾಡ್ತಾನೆ.

ಯೆಶಾಯ ಅಧ್ಯಾಯ 41 ಓದಿ. ಜೊತೆಗೆ ಪಾದಟಿಪ್ಪಣಿಗಳನ್ನು ಮತ್ತು ಅಡ್ಡ ಉಲ್ಲೇಖಗಳನ್ನು ಸಹ ಓದಿ.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.