ಮಾಹಿತಿ ಇರುವಲ್ಲಿ ಹೋಗಲು

ನೆಗೆಟಿವ್‌ ಯೋಚನೆಗೆ ಪಾಸಿಟಿವ್‌ ಪರಿಹಾರ

ನೆಗೆಟಿವ್‌ ಯೋಚನೆಗೆ ಪಾಸಿಟಿವ್‌ ಪರಿಹಾರ

ಯುವ ಜನರ ಪ್ರಶ್ನೆಗಳು

 ನಿಮ್ಮ ಬಗ್ಗೆ ನಿಮಗೇನು ಅನಿಸುತ್ತೆ?

  •   ಆಶಾವಾದಿ

     “ಬೇಜಾರು ಮಾಡ್ಕೊಳ್ಳದೆ ಖುಷಿಖುಷಿಯಾಗಿ ಇರಲಿಕ್ಕೆ ನಾನು ಆದಷ್ಟು ಪ್ರಯತ್ನಪಡ್ತಿನಿ. ನನ್ನ ಮುಖದಲ್ಲಿ ಯಾವಾಗ್ಲೂ ನಗು ಇರಬೇಕು ಅಂತ ನನ್ನಾಸೆ.”—ವಲೇರಿ.

  •   ನಿರಾಶಾವಾದಿ

     “ಏನಾದ್ರೂ ಒಳ್ಳೇದಾದ್ರೆ ಇದು ಕನಸ್ಸೇನೋ ಅಂತ ಯೋಚನೆ ಬರುತ್ತೆ.”—ರೆಬೆಕ್ಕ.

  •   ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು

     “ಆಶಾವಾದಿ ಆಗಿದ್ರೆ ಅಂದ್ಕೊಂಡ ಹಾಗೆ ನಡೆಯದಿದ್ದಾಗ ನಿರಾಶೆ ಆಗುತ್ತೆ. ನಿರಾಶಾವಾದಿ ಆಗಿದ್ರೆ ಯಾವಾಗ್ಲೂ ಬೇಜಾರು ಆಗುತ್ತೆ. ಅದಕ್ಕೇ ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ನನಗಿಷ್ಟ.”—ಅನ್ನ.

 ಇದು ಯಾಕೆ ಮುಖ್ಯ?

 “ಹರ್ಷಹೃದಯನಿಗೆ ನಿತ್ಯವೂ ಔತಣ” ಅನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 15:15) ಯಾವಾಗ್ಲೂ ನೆಗಟಿವ್‌ ಆಗಿ ಯೋಚನೆ ಮಾಡದೆ ಪಾಸಿಟಿವ್‌ ಆಗಿ ಯೋಚನೆ ಮಾಡುವವರು ತುಂಬ ಖುಷಿಯಾಗಿ ಇರ್ತಾರೆ. ಅವರಿಗೆ ತುಂಬ ಫ್ರೆಂಡ್ಸ್‌ ಇರ್ತಾರೆ. ಯಾವಾಗಲೂ ಸಪ್ಪೆ ಮುಖ ಮಾಡ್ಕೊಂಡಿದ್ರೆ ನಿಮ್ಮ ಜೊತೆ ಸೇರಲಿಕ್ಕೆ ಯಾರೂ ಇಷ್ಟಪಡಲ್ಲ.

 ನೀವು ಎಷ್ಟೇ ಪಾಸಿಟಿವ್‌ ಆಗಿದ್ರೂ ಕೆಲವೊಂದು ಕಷ್ಟ ಬರುತ್ತೆ. ಉದಾಹರಣೆಗೆ,

  •   ಅಲ್ಲಿ ಯುದ್ಧ ಆಯ್ತು, ಇಲ್ಲಿ ಟೆರರಿಸ್ಟ್‌ ಆಟ್ಯಾಕ್‌, ಇನ್ನೊಂದು ಕಡೆ ಕ್ರೈಂ. ಹೀಗೆ ಒಂದರ ಮೇಲೊಂದು ಸುದ್ದಿ ಕಿವಿಗೆ ಬೀಳುತ್ತಾ ಇರುತ್ತೆ.

  •   ಒಂದುವೇಳೆ ನಿಮ್ಮ ಕುಟುಂಬದಲ್ಲಿ ಏನಾದ್ರೂ ಸಮಸ್ಯೆ ಇರಬಹುದು.

  •   ನಿಮ್ಮಲ್ಲಿರೋ ಬಲಹೀನತೆಗಳನ್ನು ಜಯಿಸಲಿಕ್ಕೆ ಕಷ್ಟಪಡ್ತಿರಬಹುದು.

  •   ನಿಮ್ಮ ಫ್ರೆಂಡ್‌ ನಿಮ್ಮ ಮನಸ್ಸು ನೋಯಿಸಿರಬಹುದು.

 ‘ಇದೆಲ್ಲಾ ಇದ್ದದ್ದೇ’ ಅಂತ ಹೇಳಿ ಈ ಸಮಸ್ಯೆಗಳನ್ನು ಪೂರ್ತಿ ತಳ್ಳಿಹಾಕೋದು ಬೇಡ. ‘ಅಯ್ಯೋ, ಹೀಗೆ ಆಗ್ತಿದೆಯಲ್ಲಾ’ ಅಂತ ಚಿಂತೆಯಲ್ಲಿ ಮುಳುಗಿ ಹೋಗೋದು ಬೇಡ. ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ. ಆಗ ಬೇಡದೇ ಇರೋ ನೆಗಟಿವ್‌ ಯೋಚನೆ ನಿಮಗೆ ಬರಲ್ಲ. ನೀವು ನಿರಾಶೆಯಿಂದ ಕುಗ್ಗಿ ಹೋಗೋದೂ ಇಲ್ಲ.

ಬಿರುಗಾಳಿಯಂಥ ಸಮಸ್ಯೆಗಳನ್ನು ಕೂಡ ಎದುರಿಸಲಿಕ್ಕೆ ನಿಮ್ಮಿಂದ ಆಗುತ್ತೆ. ಕಾರ್ಮೋಡ ಸರಿದ ಮೇಲೆ ಸೂರ್ಯ ಹೇಗೆ ಬಂದೇ ಬರುತ್ತಾನೋ ಅದೇ ತರ ಜೀವನದಲ್ಲಿ ಒಳ್ಳೇದು ಆಗೇ ಆಗುತ್ತೆ

 ನೀವೇನು ಮಾಡಬಹುದು?

  •   ನಿಮ್ಮಿಂದಾನು ತಪ್ಪು ಆಗುತ್ತೆ ಅಂತ ಒಪ್ಕೊಳ್ಳಿ.

     “ಪಾಪಮಾಡದೆ ಒಳ್ಳೇದನ್ನೇ ನಡೆಸುವ ನೀತಿವಂತನು ಭೂಮಿಯ ಮೇಲೆ ಒಬ್ಬನೂ ಇಲ್ಲ” ಅನ್ನುತ್ತದೆ ಬೈಬಲ್‌. (ಪ್ರಸಂ. 7:20, ಪವಿತ್ರ ಗ್ರಂಥ) ಮನುಷ್ಯ ಅಂದಮೇಲೆ ತಪ್ಪು ಮಾಡೋದು ಸಹಜ. ನೀವು ಏನಾದ್ರೂ ತಪ್ಪು ಮಾಡಿದ್ರೆ ಅದರ ಅರ್ಥ ನೀವು ಸರಿಯಾದದ್ದನ್ನ ಯಾವತ್ತೂ ಮಾಡಲ್ಲ ಅಂತಲ್ಲ.

     ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ಹೇಗೆ? ತಪ್ಪು ಮಾಡಿದಾಗ ತಿದ್ದಿಕೊಳ್ಳಿ. ನೀವು 100% ಸರಿಯಾಗಿರೋದನ್ನೇ ಮಾಡ್ತಿರ ಅಂತ ನೆನಸಬೇಡಿ. ಕೇಲಬ್‌ ಅನ್ನೋ ಯುವಕ ಇದ್ರ ಬಗ್ಗೆ ಏನು ಹೇಳ್ತಾನೆ ನೋಡಿ: “ಏನಾದ್ರೂ ತಪ್ಪು ಮಾಡಿದ್ರೆ ಅದ್ರ ಬಗ್ಗೆನೇ ಯೋಚನೆ ಮಾಡ್ಕೊಂಡು ಕೂರಲ್ಲ. ತಪ್ಪಿಂದ ಪಾಠ ಕಲಿತ್ತೀನಿ. ಮತ್ತೆ ಆ ತಪ್ಪನ್ನ ಮಾಡದೇ ಇರಕ್ಕೆ ಏನು ಮಾಡಬಹುದು ಅಂತ ಯೋಚಿಸ್ತೀನಿ.”

  •   ನಿಮ್ಮನ್ನ ಬೇರೆಯವರ ಜೊತೆ ಹೋಲಿಸ್ಕೊಬೇಡಿ.

     “ಅಹಂಕಾರಿಗಳೂ ಒಬ್ಬರೊಂದಿಗೊಬ್ಬರು ಸ್ಪರ್ಧೆಗಿಳಿಯುವವರೂ ಒಬ್ಬರ ಮೇಲೊಬ್ಬರು ಅಸೂಯೆಪಡುವವರೂ ಆಗದೆ ಇರೋಣ” ಅನ್ನುತ್ತದೆ ಬೈಬಲ್‌. (ಗಲಾ. 5:26) ಸೋಶಿಯಲ್‌ ಮೀಡಿಯಾದಲ್ಲಿ ಇರೋ ಫೋಟೋಗಳನ್ನು ನೋಡುವಾಗ ಕೆಲವೊಂದು ಪಾರ್ಟಿಗೆ ನಿಮ್ಮನ್ನು ಕರೆದಿಲ್ಲ ಅಂತ ನಿಮಗೆ ಬೇಜಾರಾಗಿ ತುಂಬ ಕೋಪ ಬರಬಹುದು. ನಿಮ್ಮ ಬೆಸ್ಟ್‌ ಫ್ರೆಂಡ್‌ಸೇ ನಿಮ್ಮ ಬೆನ್ನಿಗೆ ಚೂರಿ ಹಾಕ್ತಾರೆ ಅಂತ ಅನಿಸಬಹುದು.

     ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ಹೇಗೆ? ಎಲ್ಲರೂ ನಿಮ್ಮನ್ನ ಎಲ್ಲ ಪಾರ್ಟಿಗೆ ಕರೆಯಬೇಕು ಅಂತ ಅಂದುಕೊಳ್ಳಬೇಡಿ. ಸೋಶಿಯಲ್‌ ಮೀಡಿಯಾದಲ್ಲಿ ಇರೋ ಫೋಟೋಗಳು ಪಾರ್ಟಿಗೆ ಯಾರುಯಾರು ಬಂದಿದ್ರು, ಏನೇನು ಆಯ್ತು ಅಂತ ಪೂರ್ತಿ ಕಥೆ ಹೇಳಲ್ಲ. ಹದಿವಯಸ್ಸಲ್ಲಿರೋ ಅಲೆಕ್ಸಿಸ್‌ ಏನು ಹೇಳ್ತಾನೆ ನೋಡಿ: “ಸೋಶಿಯಲ್‌ ಮೀಡಿಯಾದಲ್ಲಿ ಜನ ಅವರ ಜೀವನದಲ್ಲಿ ಆದ ಒಳ್ಳೇ ವಿಷಯಗಳನ್ನ ಮಾತ್ರ ಪೋಸ್ಟ್‌ ಮಾಡ್ತಾರೆ. ಸಾಧಾರಣ ವಿಷಯಗಳನ್ನೆಲ್ಲ ಬಿಟ್ಟುಬಿಡ್ತಾರೆ.”

  •   ಬೇರೆಯವರ ಜೊತೆ ಶಾಂತವಾಗಿ ಇರಿ, ಮುಖ್ಯವಾಗಿ ಮನೆಯಲ್ಲಿ ಇರುವವರ ಜೊತೆ.

     “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ” ಅನ್ನುತ್ತದೆ ಬೈಬಲ್‌. (ರೋಮನ್ನರಿಗೆ 12:18) ಬೇರೆಯವರ ನಡತೆನಾ ನೀವು ಕಂಟ್ರೋಲ್‌ ಮಾಡಲಿಕ್ಕೆ ಆಗಲ್ಲ. ಆದ್ರೆ ನಿಮ್ಮ ನಡತೆನಾ ನೀವು ಕಂಟ್ರೋಲ್‌ ಮಾಡಕ್ಕಾಗುತ್ತೆ. ಅದಕ್ಕೇ ನೀವು ಬೇರೆಯವರ ಜೊತೆ ಶಾಂತವಾಗಿ ಇರ್ತಿರ ಅಂತ ತೀರ್ಮಾನ ಮಾಡಿ.

     ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ಹೇಗೆ? ಈಗಾಗಲೇ ನಿಮ್ಮ ಕುಟುಂಬದಲ್ಲಿ ಸಮಸ್ಯೆ ಇದೆ. ನೀವು ಇನ್ನೇನಾದ್ರು ಮಾಡಿ ಸಮಸ್ಯೆನ ಜಾಸ್ತಿ ಮಾಡಬೇಡಿ. ಉರಿಯೋ ಬೆಂಕಿಗೆ ತುಪ್ಪ ಯಾಕೆ ಸುರಿತಿರಾ? ಹದಿವಯಸ್ಸಲ್ಲಿರೋ ಮೆಲಿಂಡ ಹೀಗೆ ಹೇಳ್ತಾಳೆ: “ಯಾವಾಗ್ಲೂ ಒಳ್ಳೇಯವರಾಗಿ ನಡ್ಕೊಳೋಕೆ ಯಾರಿಂದಾನೂ ಆಗಲ್ಲ. ಕೆಲವೊಮ್ಮೆ ನಾವು ಬೇರೆಯವರಿಗೆ ನೋವು ಮಾಡ್ತಿವಿ. ನಮಗೆ ನೋವು ಮಾಡಿರುವವರ ಹತ್ರ ಒಳ್ಳೇದಾಗಿ ನಡ್ಕೊಬೇಕಾ, ಕೆಟ್ಟದಾಗಿ ನಡ್ಕೊಬೇಕಾ ಅಂತ ನಾವು ತೀರ್ಮಾನ ಮಾಡಬೇಕು.”

  •   ಥ್ಯಾಂಕ್‌ಫುಲ್‌ ಆಗಿರಿ.

     “ನೀವು ಕೃತಜ್ಞತಾಭಾವದವರೆಂದು ತೋರಿಸಿರಿ” ಅನ್ನುತ್ತದೆ ಬೈಬಲ್‌. (ಕೊಲೊಸ್ಸೆ 3:15) ಕೃತಜ್ಞರಾಗಿದ್ದರೆ ಅಂದ್ರೆ ಥ್ಯಾಂಕ್‌ಫುಲ್‌ ಆಗಿದ್ರೆ ನಿಮ್ಮ ಜೀವನದಲ್ಲಿ ಆಗೋ ಒಳ್ಳೇ ವಿಷ್ಯಗಳನ್ನ ನೆನಸಿ ಖುಷಿಪಡ್ತೀರ. ಕೆಲವು ವಿಷ್ಯ ನೀವು ನೆನಸಿದ ಹಾಗೆ ನಡೆಯದಿದ್ದಾಗ ಬೇಜಾರು ಮಾಡ್ಕೊಳ್ಳಲ್ಲ.

     ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ಹೇಗೆ? ಸಮಸ್ಯೆ ಇದೆ ಅಂತ ಒಪ್ಕೊಳಿ. ಅದೇ ಸಮಯದಲ್ಲಿ ನಿಮ್ಮ ಜೀವನದಲ್ಲಿ ಆಗೋ ಒಳ್ಳೇ ವಿಷಯಗಳಿಗೂ ಗಮನಕೊಡಿ. ರೆಬೆಕ್ಕ ಅನ್ನೋ ಯುವತಿ ಏನು ಹೇಳ್ತಾಳೆ ನೋಡಿ: “ಪ್ರತಿದಿನ ನನ್ನ ಜೀವನದಲ್ಲಾದ ಒಂದು ಒಳ್ಳೇ ವಿಷಯನ ನಾನು ಡೈರಿಯಲ್ಲಿ ಬರೀತಿನಿ. ನನಗೆ ಸಮಸ್ಯೆಗಳಿದ್ದರೂ ಒಳ್ಳೇ ವಿಷಯಗಳು ಕೂಡ ನನ್ನ ಜೀವನದಲ್ಲಿ ನಡೀತಾ ಇದೆ ಅಂತ ಇದು ನನಗೆ ನೆನಪು ಮಾಡಿಸುತ್ತೆ.”

  •   ಒಳ್ಳೇ ಸ್ನೇಹಿತರನ್ನು ಮಾಡ್ಕೊಳ್ಳಿ.

     “ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ” ಅನ್ನುತ್ತದೆ ಬೈಬಲ್‌. (1 ಕೊರಿಂಥ 15:33) ನಿಮ್ಮ ಫ್ರೆಂಡ್ಸ್‌ ಅಣಕಿಸುವವರು, ತಪ್ಪು ಹುಡುಕುವವರು, ಕೊಂಕು ಮಾತಾಡುವವರು ಆಗಿದ್ರೆ ಅದೇ ಗುಣ ನಿಮಗೂ ಬಂದುಬಿಡುತ್ತೆ.

     ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ಹೇಗೆ? ನಿಮ್ಮ ಫ್ರೆಂಡ್ಸ್‌ಗೆ ತುಂಬ ಕಷ್ಟಗಳು ಬಂದ್ರೆ ಸ್ವಲ್ಪ ಸಮಯ ಅವರು ಕುಗ್ಗಿ ಹೋಗಬಹುದು. ಆಗ ಅವರಿಗೆ ಸಹಾಯ ಮಾಡಕ್ಕೆ ನಿಮ್ಮಿಂದ ಏನಾಗುತ್ತೋ ಅದನ್ನ ಮಾಡಿ. ಆದ್ರೆ ಅವರ ಸಮಸ್ಯೆ ನಿಮ್ಮನ್ನ ಕಿತ್ತು ತಿನ್ನಬಾರದು. ಮಿಶೆಲ್‌ ಅನ್ನೋ ಹುಡುಗಿ ಏನು ಹೇಳ್ತಾಳೆ ನೋಡಿ: “ನೆಗಟಿವ್‌ ಆಗಿ ಯೋಚಿಸುವವರು ಮಾತ್ರ ನಮ್ಮ ಫ್ರೆಂಡ್ಸ್‌ ಆಗಿದ್ರೆ ನಾವೂ ಅವರ ತರ ಆಗಿಬಿಡ್ತಿವಿ.”

 ಒಳ್ಳೇದನ್ನು ಯೋಚನೆ ಮಾಡೋದು ಹೇಗಂತ ಓದಿ

 ನಾವು ‘ಕಡೇ ದಿವಸಗಳ ಕಠಿನಕಾಲಗಳಲ್ಲಿ‘ ಬದುಕುತ್ತಿದ್ದೇವೆ ಎನ್ನುತ್ತದೆ ಬೈಬಲ್‌. (2 ತಿಮೊತಿ 3:1) ಲೋಕದಲ್ಲಿ ಕಷ್ಟ ಸಮಸ್ಯೆಗಳು ಜಾಸ್ತಿ ಆಗ್ತಿರೋದ್ರಿಂದ ಒಳ್ಳೇ ಮನೋಭಾವ ಇಟ್ಕೊಳ್ಳೋದು ಕಷ್ಟ ಅಂತ ನೀವು ನೆನಸ್ತೀರಾ? ಹಾಗಾದ್ರೆ ಈ ಲಿಂಕ್‌ ಓದಿ, “ಯಾಕಿಷ್ಟು ಕಷ್ಟ?