ಮಾಹಿತಿ ಇರುವಲ್ಲಿ ಹೋಗಲು

ಬಂಧಿತರಲ್ಲಿ ಭರವಸೆ ತುಂಬಿಸಿದ ಯೆಹೋವನ ಸಾಕ್ಷಿಗಳಿಗೆ ಪುರಸ್ಕಾರ

ಬಂಧಿತರಲ್ಲಿ ಭರವಸೆ ತುಂಬಿಸಿದ ಯೆಹೋವನ ಸಾಕ್ಷಿಗಳಿಗೆ ಪುರಸ್ಕಾರ

ಪಶ್ಚಿಮ ಆಸ್ಟ್ರೇಲಿಯಾದ ಡರ್ಬಿ ಎಂಬ ಪಟ್ಟಣದಲ್ಲಿ, ಕಾನೂನುಬಾಹಿರವಾಗಿ ವಲಸೆ ಬಂದವರನ್ನು ಬಂಧನದಲ್ಲಿಡುವ ಒಂದು ಕೇಂದ್ರವಿದೆ. ಅದರ ಹೆಸರು ಕರ್ಟನ್‌ ಇಮ್ಮಿಗ್ರೇಷನ್‌ ಡಿಟೆನ್ಷನ್‌ ಸೆಂಟರ್‌. ಇದು ಆಸ್ಟ್ರೇಲಿಯಾದ ಒಂದು ದೊಡ್ಡ ಬಂಧನ ಕೇಂದ್ರವಾಗಿದೆ. * ಈ ಕೇಂದ್ರವು 9 ಯೆಹೋವನ ಸಾಕ್ಷಿಗಳಿಗೆ ಸರ್ಟಿಫಿಕೆಟ್‌ಗಳನ್ನು ಕೊಟ್ಟು ಪುರಸ್ಕರಿಸಿತು. ಕಾರಣ, ಆ ಕೇಂದ್ರದಲ್ಲಿದ್ದ ಬಂಧಿತರಿಗೆ ಸಾಕ್ಷಿಗಳು ಗಮನಾರ್ಹ ಸೇವೆ ಮಾಡಿದ್ದರು.

ಪ್ರತಿವಾರ ಯೆಹೋವನ ಸಾಕ್ಷಿಗಳು, ಅಲ್ಲಿರುವ ಬಂಧಿತರೊಟ್ಟಿಗೆ ಸ್ವಲ್ಪ ಸಮಯ ಮಾತಾಡಿ ಅವರ ಅನುಭವಗಳನ್ನು ಕೇಳುತ್ತಿದ್ದರು. ಜೊತೆಗೆ, ಬೈಬಲ್‌ನಲ್ಲಿರುವ ವಿಷಯಗಳನ್ನು ತಿಳಿಸುತ್ತಾ ಬಂಧಿತರಿಗೆ ಸಾಂತ್ವನ ನೀಡಿ, ಅವರಲ್ಲಿ ಭರವಸೆ ತುಂಬಿಸುತ್ತಿದ್ದರು. ಆ ಕೇಂದ್ರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪರ್ಕಾಧಿಕಾರಿಯಾದ ಕ್ರಿಸ್ಟಫರ್‌ ರಿಡ್ಡಾಕ್‌ ಹೀಗೆ ಹೇಳುತ್ತಾನೆ: “ಯೆಹೋವನ ಸಾಕ್ಷಿಗಳು ನಮ್ಮ ಕೇಂದ್ರದಲ್ಲಿರುವ ಬಂಧಿತರನ್ನು ಭೇಟಿ ಮಾಡಿ ಹೋದ ಮೇಲೆ ಆ ಭೇಟಿಯಿಂದಾದ ಪ್ರಭಾವವನ್ನು ಬಂಧಿತರಲ್ಲಿ ಗುರುತಿಸಬಹುದು. ಅವರ ಮನಸ್ಸು ತಿಳಿಯಾಗಿ, ಮುಖದಲ್ಲಿ ಮಂದಹಾಸವಿರುತ್ತದೆ, ಆ ಭೇಟಿ ಅವರಿಗೆ ಚೈತನ್ಯಕರವಾಗಿರುತ್ತದೆ. ಅವರಿಗೆ ಒಳ್ಳೆಯದಾಗಬೇಕೆಂದು ಬಯಸುವ ಈ ಸಾಕ್ಷಿಗಳು ನಿಜಕ್ಕೂ ಪ್ರಶಂಸಾರ್ಹರು.”

ರಿಡ್ಡಾಕ್‌ ಹೇಳಿದ್ದು, ‘ಯೆಹೋವನ ಸಾಕ್ಷಿಗಳು ಮಾಡಿರುವ ಸಹಾಯದ ಮುಂದೆ ನಾವು ಕೊಟ್ಟಿರುವ ಸರ್ಟಿಫಿಕೆಟ್‌ಗಳು ಏನೇನೂ ಅಲ್ಲ. ಇದು, ನಮ್ಮ ಕೇಂದ್ರದಲ್ಲಿರುವ ಜನರ ಜೀವನದಲ್ಲಿ ಸುಧಾರಣೆಯನ್ನು ತಂದಿದ್ದಕ್ಕೆ ಕೊಟ್ಟ ಒಂದು ಚಿಕ್ಕ ಕೃತಜ್ಞತೆಯ ಪತ್ರವಷ್ಟೆ. ಯೆಹೋವನ ಸಾಕ್ಷಿಗಳು ಅವರ ಕುಟುಂಬಕ್ಕೆ, ಸಭೆಗೆ ಮತ್ತು ನಂಬಿಕೆಗೆ ಒಳ್ಳೆಯ ಹೆಸರು ತಂದಿದ್ದಾರೆ.’

^ ಪ್ಯಾರ. 2 ಆ ಬಂಧನ ಕೇಂದ್ರದಲ್ಲಿ ಸುಮಾರು 1,500ರಷ್ಟು ಜನರನ್ನು ಬಂಧಿಸಬಹುದು.