ಮಾಹಿತಿ ಇರುವಲ್ಲಿ ಹೋಗಲು

ಮುಖ್ಯ ಕಾರ್ಯಾಲಯದ ಸ್ಥಳಾಂತರದ ಕುರಿತು ಒಂದಿಷ್ಟು ಮಾಹಿತಿ

ಮುಖ್ಯ ಕಾರ್ಯಾಲಯದ ಸ್ಥಳಾಂತರದ ಕುರಿತು ಒಂದಿಷ್ಟು ಮಾಹಿತಿ

2009ರ ಜುಲೈನಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಮುಖ್ಯ ಕಾರ್ಯಾಲಯವನ್ನು ಸ್ಥಳಾಂತರಿಸುವ ಸಲುವಾಗಿ ನ್ಯೂಯಾರ್ಕ್‌ ನಗರದಲ್ಲಿ ಜಮೀನನ್ನು ಖರೀದಿಸಿದರು. 1909ರಿಂದ ಮುಖ್ಯ ಕಾರ್ಯಾಲಯವು ನ್ಯೂಯಾರ್ಕ್‌ ನಗರದ ಬ್ರೂಕ್ಲಿನ್‌ನಲ್ಲಿತ್ತು. ಇದಕ್ಕೆ ವಾಯುವ್ಯ ದಿಕ್ಕಿಗೆ ಸುಮಾರು 80 ಕಿಲೋಮೀಟರ್‌ ದೂರದಲ್ಲಿ ಈಗ ಖರೀದಿಸಿರುವ ಜಮೀನಿದೆ. ಈ ಜಮೀನಿನ ಒಟ್ಟು ವಿಸ್ತೀರ್ಣ 253 ಎಕರೆಗಳು.

ಮುಂದೆ ಕಟ್ಟಲಿರುವ ಈ ಹೊಸ ಕಟ್ಟಡದಲ್ಲಿ ಸುಮಾರು 800 ಮಂದಿ ಸಾಕ್ಷಿಗಳು ಕೆಲಸ ಮಾಡಬಹುದು. ಅದರಲ್ಲಿ ಒಂದು ಆಫೀಸ್‌ ಕಟ್ಟಡ, ಒಂದು ಸರ್ವಿಸ್‌ ಕಟ್ಟಡ ಮತ್ತು ನಾಲ್ಕು ವಸತಿ ಕಟ್ಟಡಗಳು ಸೇರಿವೆ. ಅಲ್ಲದೇ ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸವನ್ನು ತಿಳಿಸುವ ಒಂದು ಸಂಗ್ರಹಾಲಯವನ್ನು ಕಟ್ಟುವ ಯೋಜನೆ ಇದೆ.

ಈ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕಾಗಿ 45 ಎಕರೆಗಳಷ್ಟು ಜಾಗವನ್ನು ಮಾತ್ರ ತೆಗೆದುಕೊಳ್ಳಲಾಗಿದೆ. ಕಾಡಿನಂತಿರುವ ಉಳಿದ ಜಾಗವನ್ನು ಹಾಗೇ ಬಿಡಲಾಗಿದೆ. ತೋಟಗಾರಿಕೆಯಲ್ಲಿ ಹುಲ್ಲುಹಾಸಿಗಾಗಿ ಹೆಚ್ಚಿನ ಜಾಗವನ್ನು ತೆಗೆದುಕೊಂಡಿಲ್ಲ. ಬದಲಿಗೆ ಅಲ್ಲಿರುವ ಗಿಡಮರಗಳನ್ನು ಕಡಿಯದೆ ಹಾಗೇ ಬಿಡಲಾಗಿದೆ.

ಕಟ್ಟಡ ವಿನ್ಯಾಸಗಾರರು ಕಡಿಮೆ ಖರ್ಚಿನಲ್ಲಿ ಉತ್ತಮ ಬಾಳಿಕೆ ಬರುವಂತಹ ರೀತಿಯಲ್ಲಿ ಕಟ್ಟಡವನ್ನು ವಿನ್ಯಾಸ ಮಾಡಿದ್ದಾರೆ. ಇದರಿಂದ ನಿರ್ಮಾಣ ಕಾರ್ಯದ ಕರ್ಚು ವೆಚ್ಚ ಕಡಿಮೆಯಾಗಲಿದೆ. ಉದಾಹರಣೆಗೆ ಕಟ್ಟಡದ ತಾಪಮಾನವನ್ನು ಮತ್ತು ಮಳೆ ನೀರಿನ ಹರಿಯುವಿಕೆಯನ್ನು ಕಡಿಮೆ ಮಾಡಲು ಕಟ್ಟಡದ ಛಾವಣಿಯ ಮೇಲೆ ಕೆಲವು ಸಸ್ಯಗಳನ್ನು ನೆಡಲಾಗಿದೆ. ಆಫೀಸ್‌ ಕಟ್ಟಡದಲ್ಲಿ ನೈಸರ್ಗಿಕ ಬೆಳಕಿಗಾಗಿ ಕೂಡ ಹೆಚ್ಚಿನ ಗಮನ ಕೊಡಲಾಗಿದೆ. ನೀರು ಕೂಡ ಹೆಚ್ಚು ಪೋಲಾಗದಂತೆ ನೋಡಿಕೊಳ್ಳಲಾಗಿದೆ.

ಈ ಸ್ಥಳಾಂತರಕ್ಕೆ ಕಾರಣವಾದರೂ ಏನು? ಈ ಮುಂಚೆ ಬೈಬಲ್‌ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಬ್ರೂಕ್ಲಿನ್‌ನಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು. ಆದರೆ ಈಗ ಲೋಕದ ಬೇರೆ ಬೇರೆ ಕಡೆಗಳಲ್ಲಿರುವ ಯೆಹೋವನ ಸಾಕ್ಷಿಗಳ ಇತರ ಬ್ರಾಂಚ್‌ಗಳಲ್ಲೂ ಮುದ್ರಿಸಲಾಗುತ್ತಿದೆ. 2004ರಲ್ಲಿ ಮುಖ್ಯ ಕಾರ್ಯಲಯದ ಮುದ್ರಣ ಮತ್ತು ರವಾನೆ ಮಾಡುವ ಡಿಪಾರ್ಟ್‌ಮೆಂಟನ್ನು ಬ್ರೂಕ್ಲಿನ್‌ನ ವಾಯುವ್ಯ ದಿಕ್ಕಿಗಿರುವ ವಾಲ್‌ಕಿಲ್‌ಗೆ ಸ್ಥಳಾಂತರಿಸಲಾಯಿತು. ಇದು ಬ್ರೂಕ್ಲಿನಿಂದ ಸುಮಾರು 145 ಕಿಲೋಮೀಟರ್‌ ದೂರದಲ್ಲಿದೆ.

ಜೊತೆಗೆ ಖರ್ಚುವೆಚ್ಚವನ್ನು ಕಡಿಮೆ ಮಾಡಲು ಸಹ ಈ ಯೋಜನೆ ಮಾಡಲಾಯಿತು. ಯಾಕೆಂದರೆ ಬ್ರೂಕ್ಲಿನ್‌ನಲ್ಲಿ ಕೆಲಸಕಾರ್ಯಗಳನ್ನು ನಿರ್ವಹಿಸಲು ತುಂಬಾ ಖರ್ಚಾಗುತ್ತಿತ್ತು. ಹಾಗಾಗಿ ಕಾಣಿಕೆಗಳನ್ನು ಉತ್ತಮವಾಗಿ ಬೈಬಲ್‌ ಶಿಕ್ಷಣ ಕಾರ್ಯಕ್ರಮಗಳಿಗೆ ಸದುಪಯೋಗಿಸಲು ಈ ಸ್ಥಳಾಂತರವನ್ನು ಮಾಡಲಾಯಿತು.

ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನುಮತಿ ಸಿಗುವುದಕ್ಕಿಂತ ಮುಂಚೆ ಕೆಲವೊಂದು ವಿಷಯಗಳನ್ನು ಪರಿಶೀಲಿಸುವ ಅಗತ್ಯವಿದೆ. ಎಲ್ಲವೂ ಸರಿಯಾಗಿದ್ದರೆ ಈ ಕಟ್ಟಡ ಕಾಮಗಾರಿ 2013ಕ್ಕೆ ಶುರುವಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ಸಂಪೂರ್ಣಗೊಳ್ಳಲಿದೆ.

ವಾಲ್‌ಕಿಲ್‌ನಲ್ಲಿರುವ ಮುದ್ರಣ ಕಟ್ಟಡವಷ್ಟೇ ಅಲ್ಲ, ಯೆಹೋವನ ಸಾಕ್ಷಿಗಳ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ಪ್ಯಾಟರ್‌ಸನ್‌ನಲ್ಲೂ ಒಂದು ಕಟ್ಟಡವಿದೆ. ಅಮೆರಿಕ ಮತ್ತು ಇನ್ನೂ ಅನೇಕ ದೇಶಗಳಲ್ಲಿ ಬ್ರಾಂಚ್‌ ಆಫೀಸ್‌ಗಳಿವೆ. ಲೋಕವ್ಯಾಪಕವಾಗಿ ಯೆಹೋವ ಸಾಕ್ಷಿಗಳ ಸಂಖ್ಯೆ 70 ಲಕ್ಷಕ್ಕಿಂತ ಹೆಚ್ಚಿದೆ.