ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಅಂದರೆ ಏನು?

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಅಂದರೆ ಏನು?

 ಆಡಳಿತ ಮಂಡಲಿ ಪ್ರೌಢ ಕ್ರೈಸ್ತರ ಒಂದು ಚಿಕ್ಕ ಗುಂಪಾಗಿದೆ. ಅವರು ಯೆಹೋವನ ಸಾಕ್ಷಿಗಳಿಗೆ ಬೇಕಾದ ಮಾರ್ಗದರ್ಶನಗಳನ್ನು ಕೊಡ್ತಾರೆ. ಇದನ್ನು ಎರಡು ವಿಧದಲ್ಲಿ ಮಾಡ್ತಾರೆ.

 ಒಂದನೇ ಶತಮಾನದಲ್ಲಿ ‘ಯೆರೂಸಲೇಮಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರು’ ಸಭೆಗೋಸ್ಕರ ತೀರ್ಮಾನಗಳನ್ನು ಮಾಡ್ತಿದ್ರು. ಅದೇ ಮಾದರಿಯನ್ನ ಇವತ್ತು ಆಡಳಿತ ಮಂಡಲಿಯವರು ಪಾಲಿಸ್ತಿದ್ದಾರೆ. (ಅಪೊಸ್ತಲರ ಕಾರ್ಯ 15:2) ಆದರೆ ಆಡಳಿತ ಮಂಡಲಿಯ ಸದಸ್ಯರು ನಮ್ಮ ಸಂಘಟನೆಯ ನಾಯಕರಲ್ಲ. ಅವರು ಯೆಹೋವ ದೇವರು ನೇಮಿಸಿರೋ ಯೇಸು ಕ್ರಿಸ್ತನೇ ಸಭೆಯ ಯಜಮಾನ ಅಂತ ಒಪ್ಪಿಕೊಳ್ತಾರೆ. ಅಷ್ಟೇ ಅಲ್ಲ ಮಾರ್ಗದರ್ಶನಕ್ಕಾಗಿ ಬೈಬಲ್‌ ಏನು ಹೇಳುತ್ತೆ ಅಂತ ನೋಡ್ತಾರೆ.—1 ಕೊರಿಂಥ 11:3; ಎಫೆಸ 5:23.

ಆಡಳಿತ ಮಂಡಲಿಯ ಸದಸ್ಯರು ಯಾರು?

 ಆಡಳಿತ ಮಂಡಲಿಯ ಸದಸ್ಯರು ಯಾರಂದ್ರೆ ಕೆನೆತ್‌ ಕುಕ್‌, ಗೇಜ್‌ ಫ್ಲೀಗಲ್‌, ಸ್ಯಾಮ್ಯೆಲ್‌ ಹರ್ಡ್‌, ಜೆಫ್ರಿ ಜ್ಯಾಕ್ಸನ್‌, ಸ್ಟೀಫನ್‌ ಲೆಟ್‌, ಗೆರಿಟ್‌ ಲಾಶ್‌, ಮಾರ್ಕ್‌ ಸ್ಯಾಂಡರ್ಸನ್‌, ಡೇವಿಡ್‌ ಸ್ಪ್ಲೇನ್‌ ಮತ್ತು ಜೆಫ್ರಿ ವಿಂಡರ್‌. ಇವರು ಅಮೆರಿಕದ ವಾರ್ವಿಕ್‌ನಲ್ಲಿರೋ ಮುಖ್ಯ ಕಾರ್ಯಾಲಯದಲ್ಲಿ ಇದ್ದಾರೆ.

ಆಡಳಿತ ಮಂಡಲಿ ಹೇಗೆ ಸಂಘಟಿತವಾಗಿದೆ?

 ಎಲ್ಲ ಕೆಲಸಗಳನ್ನು ಚೆನ್ನಾಗಿ ಮಾಡೋಕೆ ಆಡಳಿತ ಮಂಡಲಿಗೆ ಆರು ಕಮಿಟಿಗಳು ಸಹಾಯಮಾಡುತ್ತೆ. ಆಡಳಿತ ಮಂಡಲಿಯ ಸದಸ್ಯರು ಒಂದು ಅಥವಾ ಅದಕ್ಕಿಂತ ಹೆಚ್ಚು ಕಮಿಟಿಗಳಲ್ಲಿ ಕೆಲಸ ಮಾಡ್ತಾರೆ.

  •   ಸಂಯೋಜಕರ ಸಮಿತಿ: ಕಾನೂನಿಗೆ ಸಂಬಂಧಪಟ್ಟ ವಿಷಯಗಳನ್ನು ನೋಡಿಕೊಳ್ಳುತ್ತೆ. ವಿಪತ್ತಿನ ಸಮಯದಲ್ಲಿ ಮತ್ತು ಹಿಂಸೆ ವಿರೋಧ ಬಂದಾಗ ಸಹಾಯ ಮಾಡುತ್ತೆ. ಅಲ್ಲದೆ ತುರ್ತು ಕೆಲಸಗಳನ್ನೂ ನೋಡಿಕೊಳ್ಳುತ್ತೆ.

  •   ಸಿಬ್ಬಂದಿ ಸಮಿತಿ: ಬೆತೆಲ್‌ ಕುಟುಂಬದವರ ಅಗತ್ಯಗಳನ್ನು ನೋಡಿಕೊಳ್ಳುತ್ತೆ.

  •   ಪ್ರಕಾಶಕರ ಸಮಿತಿ: ಬೈಬಲ್‌ ಸಾಹಿತ್ಯಗಳನ್ನು ತಯಾರಿಸಿ ಅದನ್ನು ಸಾಗಿಸುತ್ತೆ. ರಾಜ್ಯ ಸಭಾಗೃಹಗಳ, ಭಾಷಾಂತರ ಕಛೇರಿಗಳ ಮತ್ತು ಶಾಖಾ ಕಛೇರಿಗಳ ನಿರ್ಮಾಣ ಕೆಲಸ ನೋಡಿಕೊಳ್ಳುತ್ತೆ.

  •   ಸೇವಾ ಸಮಿತಿ: ‘ದೇವರ ಆಳ್ವಿಕೆಯ ಸಿಹಿಸುದ್ದಿಯ’ ಸಾರುವ ಕೆಲಸ ನೋಡಿಕೊಳ್ಳುತ್ತೆ.—ಮತ್ತಾಯ 24:14.

  •   ಶಿಕ್ಷಣ ಸಮಿತಿ: ಕೂಟಗಳಲ್ಲಿ, ಶಾಲೆಗಳಲ್ಲಿ, ಆಡಿಯೋ ಮತ್ತು ವಿಡಿಯೋ ಪ್ರೋಗ್ರಾಮ್‌ಗಳಲ್ಲಿ ಬರೋ ಆಧ್ಯಾತ್ಮಿಕ ಆಹಾರವನ್ನು ತಯಾರಿಸೋಕೆ ಮಾರ್ಗದರ್ಶಿಸುತ್ತೆ.

  •   ಲೇಖಕರ ಸಮಿತಿ: ಮುದ್ರಿತ ರೂಪದಲ್ಲಿ ಮತ್ತು ವೆಬ್‌ಸೈಟಿನಲ್ಲಿ ಬರೋ ಆಧ್ಯಾತ್ಮಿಕ ಆಹಾರವನ್ನು ತಯಾರಿಸೋಕೆ ನಿರ್ದೇಶಿಸುತ್ತದೆ. ಭಾಷಾಂತರ ಕೆಲಸವನ್ನು ನೋಡಿಕೊಳ್ಳುತ್ತೆ.

 ಈ ಕಮಿಟಿಗಳ ಜೊತೆ ಮಾಡೋ ಕೆಲಸಗಳಲ್ಲದೇ ಸಂಘಟನೆಯ ಅಗತ್ಯಗಳನ್ನು ನೋಡಿಕೊಳ್ಳೋಕೆ ಪ್ರತಿ ವಾರ ಆಡಳಿತ ಮಂಡಲಿ ಸೇರಿಬರುತ್ತೆ. ಈ ಕೂಟಗಳಲ್ಲಿ ಆಡಳಿತ ಮಂಡಲಿಯ ಸದಸ್ಯರು ಬೈಬಲ್‌ ಏನು ಹೇಳುತ್ತೆ ಅಂತ ನೋಡುತ್ತಾರೆ ಮತ್ತು ಒಳ್ಳೇ ತೀರ್ಮಾನಗಳನ್ನು ತಗೊಳ್ಳೋಕೆ ಪವಿತ್ರ ಶಕ್ತಿಗಾಗಿ ಕೇಳಿಕೊಳ್ತಾರೆ.—ಅಪೊಸ್ತಲರ ಕಾರ್ಯ 15:25.

ಆಡಳಿತ ಮಂಡಲಿಯ ಸಹಾಯಕರು ಯಾರು?

 ಆಡಳಿತ ಮಂಡಲಿಗೆ ಸಹಾಯ ಮಾಡ್ತಿರೋ ಈ ಸಹೋದರರು ನಂಬಿಗಸ್ತ ಕ್ರೈಸ್ತರಾಗಿದ್ದಾರೆ. (1 ಕೊರಿಂಥ 4:2) ಇವರು ಕೆಲಸ ಮಾಡ್ತಿರೋ ಕಮಿಟಿಗಳಲ್ಲಿ ತಮ್ಮ ಅನುಭವ ಮತ್ತು ಸಾಮರ್ಥ್ಯವನ್ನು ಚೆನ್ನಾಗಿ ಬಳಸ್ತಾರೆ. ಅಷ್ಟೇ ಅಲ್ಲ ಇವರಿಗೋಸ್ಕರ ಏರ್ಪಡಿಸಿರೋ ಪ್ರತಿ ವಾರದ ಕೂಟಗಳಿಗೂ ಹೋಗ್ತಾರೆ. ಇವರು ನಿರ್ಣಯ ಮಾಡಲ್ಲ ನಿಜ. ಆದರೆ ಒಳ್ಳೇ ನಿರ್ಣಯಗಳನ್ನು ಮಾಡೋಕೆ ಬೇಕಾದ ಸಲಹೆ, ಹಿನ್ನೆಲೆಗಳನ್ನ ಕೊಡ್ತಾರೆ. ಕಮಿಟಿಯವರ ಜೊತೆ ಚರ್ಚೆ ಮಾಡಿದ ಮೇಲೆ ಒಂದು ತೀರ್ಮಾನ ತಗೊಳ್ತಾರೆ, ಅಲ್ಲದೇ ಅದರ ಪ್ರಗತಿಯನ್ನು ಈ ಸಹಾಯಕರು ನೋಡಿಕೊಳ್ತಾರೆ. ಇವರನ್ನ ಪ್ರಪಂಚದ ಬೇರೆ ಬೇರೆ ಕಡೆಯಲ್ಲಿರೋ ಸಹೋದರರನ್ನು ಭೇಟಿಮಾಡೋಕೆ ಮತ್ತು ವಾರ್ಷಿಕ ಕೂಟ ಅಥವಾ ಗಿಲ್ಯಡ್‌ ಪದವಿಪ್ರದಾನ ಸಮಾರಂಭದಲ್ಲಿ ಭಾಷಣ ಕೊಡೋಕೆ ಆಡಳಿತ ಮಂಡಲಿ ನೇಮಿಸುತ್ತೆ.

ಸಹಾಯಕರ ಪಟ್ಟಿ

ಸಮಿತಿ

ಹೆಸರು

ಸಂಯೋಜಕರ

  • ಎಕ್ರನ್‌, ಜಾನ್‌

  • ಗಿಲ್ಲೀಸ್‌, ಪೌಲ್‌

  • ಸ್ನೈಡರ್‌, ಟ್ರಾಯ್‌

ಸಿಬ್ಬಂದಿ

  • ಗ್ರಿಜಲ್‌, ಜೆರಲ್ಡ್‌

  • ಲಾಫ್ರಾಂಕಾ, ಪ್ಯಾಟ್ರಿಕ್‌

  • ಮೊಲ್‌ಚನ್‌, ಡ್ಯಾನಿಯೆಲ್‌

  • ಸ್ಕಾಟ್‌, ಮಾರ್ಕ್‌

  • ವಾಲ್ಸ್‌, ರಾಲ್ಫ್‌

ಪ್ರಕಾಶಕರ

  • ಬಟ್ಲರ್‌, ರಾಬರ್ಟ್‌

  • ಕಾರ್ಕರ್ನ್‌, ಹ್ಯಾರಲ್ಡ್‌

  • ಗ್ಲೋಕೆಂಟಿನ್‌, ಗೇಜಸ್‌

  • ಗಾರ್ಡನ್‌, ಡಾನಲ್ಡ್‌

  • ಲೂಚಿಯಾನಿ, ರಾಬರ್ಟ್‌

  • ರೈನ್‌ಮ್ಯೂಲರ್‌, ಆ್ಯಲಿಕ್ಸ್‌

  • ಸಿಂಕ್ಲರ್‌, ಡೇವಿಡ್‌

ಸೇವಾ

  • ಬ್ರೋ, ಗ್ಯಾರೀ

  • ಡೆಲಿಂಗರ್‌, ಜೊಯೆಲ್‌

  • ಜಾರ್ಜಸ್‌, ಬೆಟ್ಟಿ

  • ಗ್ರಿಫಿನ್‌, ಆ್ಯಂಥನಿ

  • ಹಯಾಟ್‌, ಸೆತ್‌

  • ಜೆಡೇಲ್‌, ಜೋಡಿ

  • ಮೇವರ್‌, ಕ್ರಿಸ್ಟಫರ್‌

  • ಪೆರ್ಲಾ, ಬಾಲ್ಟಾಸರ್‌

  • ರಂಫ್‌, ಜೇಕಬ್‌

  • ಸ್ಮಿತ್‌, ಜೊನಾತನ್‌

  • ಟರ್ನರ್‌, ವಿಲ್ಯಮ್‌

  • ವೀವರ್‌, ಲೀಆನ್‌

ಶಿಕ್ಷಣ

  • ಬ್ಯಾಂಕ್ಸ್‌, ಮೈಕಲ್‌

  • ಕರ್ಜನ್‌, ರಾನಲ್ಡ್‌

  • ಫ್ಲೊಡಿನ್‌, ಕೆನೆತ್‌

  • ಮಾಲನ್ಫೊಂಟ್‌, ವಿಲ್ಯಮ್‌

  • ನ್ಯೂಮರ್‌, ಮಾರ್ಕ್‌

  • ಶೇಫರ್‌, ಡೇವಿಡ್‌

ಲೇಖಕರ

  • ಅಹಲಾಡಿಸ್‌ ನಿಕೊಲೊಸ್‌

  • ಕ್ರಿಸ್ಟೇನ್‌ಸನ್‌, ಪರ್‌

  • ಸಿರಾಂಕೋ, ರಾಬರ್ಟ್‌

  • ಗಾಡ್‌ಬರ್ನ್‌ ಕೆನೆತ್‌

  • ಮ್ಯಾಂಟ್ಸ್‌, ಜೇಮ್ಸ್‌

  • ಮರೇ, ಈಸಾಕ್‌

  • ಮಾರ್ಟಿನ್‌, ಕ್ಲೈವ್‌

  • ಮೈಯರ್‌, ಲಿಯೋನಾರ್ಡ್‌

  • ಸ್ಮಾಲೀ, ಜೀನ್‌

  • ವಾನ್‌ ಸೆಲ್ಮ್‌, ಹೆರ್ಮನಸ್‌