ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಪ್ರಾಟೆಸ್ಟೆಂಟ್‌ರಾ?

ಯೆಹೋವನ ಸಾಕ್ಷಿಗಳು ಪ್ರಾಟೆಸ್ಟೆಂಟ್‌ರಾ?

 ಇಲ್ಲ, ಯೆಹೋವನ ಸಾಕ್ಷಿಗಳು ಕ್ರೈಸ್ತರು, ಪ್ರಾಟೆಸ್ಟೆಂಟ್‌ ಅಲ್ಲ. ಯಾಕೆ? ಏನಾದರೂ ಕಾರಣ ಇದೆಯಾ?

 “ರೋಮನ್‌ ಕ್ಯಾತೊಲಿಕರ ಧಾರ್ಮಿಕ ಚಳುವಳಿ”ಯನ್ನು ವಿರೋಧಿಸುವವರನ್ನು ಪ್ರಾಟೆಸ್ಟೆಂಟ್‌ ಎಂದು ಕರೆಯಲಾಗುತ್ತದೆ. ಕ್ಯಾತೊಲಿಕ್‌ ಚರ್ಚ್‌ ಬೋಧಿಸುವುದನ್ನು ಯೆಹೋವನ ಸಾಕ್ಷಿಗಳು ಒಪ್ಪುವುದಿಲ್ಲ ಎಂದ ಮಾತ್ರಕ್ಕೆ ಅವರು ಪ್ರಾಟೆಸ್ಟೆಂಟ್‌ ಗುಂಪಿಗೆ ಸೇರಿದವರೆಂದು ಹೇಳಲು ಆಗುವುದಿಲ್ಲ. ಇದಕ್ಕಿರುವ ಕಾರಣಗಳನ್ನು ಗಮನಿಸಿ:

  1.  1. ಪ್ರಾಟೆಸ್ಟೆಂಟ್‌ರು ನಂಬುವ ಅನೇಕ ವಿಷಯಗಳು ಬೈಬಲ್‌ ಏನು ಬೋಧಿಸುತ್ತದೋ ಅದಕ್ಕೆ ವಿರುದ್ಧವಾಗಿದೆ. ಉದಾಹರಣೆಗೆ, “ದೇವರು ಒಬ್ಬನೇ” ಎಂದು ಬೈಬಲ್‌ ಹೇಳುತ್ತದೆ, ತ್ರಿಯೇಕ ಅಲ್ಲ. (1 ತಿಮೊಥೆಯ 2:5; ಯೋಹಾನ 14:28) ಅಷ್ಟೇ ಅಲ್ಲದೆ, ದೇವರು ಕೆಟ್ಟವರನ್ನು ನರಕಕ್ಕೆ ಹಾಕುತ್ತಾನೆಂದು ಬೈಬಲ್‌ ಬೋಧಿಸುವುದಿಲ್ಲ. ಅವರನ್ನು ನಿತ್ಯಕ್ಕೂ ನಾಶನಮಾಡಲಾಗುತ್ತೆ ಎನ್ನಲಾಗಿದೆ.—ಕೀರ್ತನೆ 37:9; 2 ಥೆಸಲೊನೀಕ 1:9.

  2.  2. ನಾವು ಕ್ಯಾತೊಲಿಕ್‌ ಚರ್ಚನ್ನಾಗಲಿ ಇನ್ಯಾವುದೇ ಧಾರ್ಮಿಕ ಗುಂಪನ್ನಾಗಲಿ ವಿರೋಧಿಸುವುದೂ ಇಲ್ಲ ಸುಧಾರಿಸಲು ಪ್ರಯತ್ನಿಸುವುದೂ ಇಲ್ಲ. ಬದಲಿಗೆ ನಾವು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತೇವೆ. ಇತರರಿಗೆ ದೇವರ ರಾಜ್ಯದ ಮೇಲೆ ನಂಬಿಕೆಯನ್ನು ಕಟ್ಟಲು ನೆರವಾಗುತ್ತೇವೆ. (ಮತ್ತಾಯ 24:14; 28:19, 20) ಇತರ ಧಾರ್ಮಿಕ ಗುಂಪುಗಳಲ್ಲಿ ಸುಧಾರಣೆ ತರುವುದು ನಮ್ಮ ಗುರಿಯಲ್ಲ. ನಮ್ಮ ಮುಖ್ಯ ಗುರಿ ಯಥಾರ್ಥ ಜನರಿಗೆ ಸತ್ಯ ದೇವರ ಕುರಿತು ಮತ್ತು ಆತನ ವಾಕ್ಯವಾದ ಬೈಬಲಿನ ಕುರಿತು ಕಲಿಸುವುದೇ ಆಗಿದೆ.—ಕೊಲೊಸ್ಸೆ 1:9, 10; 2 ತಿಮೊಥೆಯ 2:24, 25.