ಮಾಹಿತಿ ಇರುವಲ್ಲಿ ಹೋಗಲು

‘ನಾವು ನಂಬುವುದನ್ನೇ ನೀವೂ ನಂಬಬೇಕು’ ಎಂದು ಯೆಹೋವನ ಸಾಕ್ಷಿಗಳು ಮಕ್ಕಳಿಗೆ ಒತ್ತಾಯಿಸುತ್ತಾರಾ?

‘ನಾವು ನಂಬುವುದನ್ನೇ ನೀವೂ ನಂಬಬೇಕು’ ಎಂದು ಯೆಹೋವನ ಸಾಕ್ಷಿಗಳು ಮಕ್ಕಳಿಗೆ ಒತ್ತಾಯಿಸುತ್ತಾರಾ?

 ಇಲ್ಲ, ಏಕೆಂದರೆ ದೇವರನ್ನು ಆರಾಧಿಸಬೇಕಾ ಬೇಡವಾ ಅನ್ನೋದು ಅವರವರಿಗೆ ಬಿಟ್ಟ ವಿಷಯ. (ರೋಮನ್ನರಿಗೆ 14:12) ಯೆಹೋವನ ಸಾಕ್ಷಿಗಳು ಮಕ್ಕಳಿಗೆ ಬೈಬಲಲ್ಲಿ ಏನೇನಿದೆ ಅಂತ ಕಲಿಸುತ್ತಾರೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಯೆಹೋವನ ಸಾಕ್ಷಿ ಆಗಬೇಕಾ ಬೇಡವಾ ಅಂತ ಅವರೇ ನಿರ್ಣಯ ಮಾಡಬೇಕು.—ರೋಮನ್ನರಿಗೆ 12:2; ಗಲಾತ್ಯ 6:5.

 ಅನೇಕ ಹೆತ್ತವರ ಹಾಗೆ ಯೆಹೋವನ ಸಾಕ್ಷಿಗಳು ಕೂಡ ತಮ್ಮ ಮಕ್ಕಳ ಜೀವನ ತುಂಬ ಚೆನ್ನಾಗಿರಬೇಕು ಅಂತ ಆಸೆಪಡುತ್ತಾರೆ. ಹಾಗಾಗಿ ಅವರ ಮಕ್ಕಳಿಗೆ ಪ್ರಯೋಜನ ಆಗುವ ವಿಷಯಗಳನ್ನು ಕಲಿಸುತ್ತಾರೆ. ಉದಾಹರಣೆಗೆ ಜೀವನದಲ್ಲಿ ಉಪಯೋಗ ಆಗುವ ಕೌಶಲಗಳು, ನೈತಿಕ ವಿಷಯದಲ್ಲಿ ಸರಿ-ತಪ್ಪುಗಳು ಮತ್ತು ಧಾರ್ಮಿಕ ನಂಬಿಕೆಗಳನ್ನು ಕಲಿಸುತ್ತಾರೆ. ಬೈಬಲ್‌ ಹೇಳುವ ಪ್ರಕಾರ ಜೀವನ ಮಾಡಿದರೆ ಒಳ್ಳೇದು ಎಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಹಾಗಾಗಿ ಅವರು ಹಾಗೆ ಜೀವನ ಮಾಡುವುದು ಎಷ್ಟು ಪ್ರಾಮುಖ್ಯ ಎಂದು ಕಲಿಸುತ್ತಾರೆ. ಅದಕ್ಕೇ ಅವರು ಮಕ್ಕಳಿಗೆ ಬೈಬಲ್‌ ಸ್ಟಡಿ ಮಾಡುತ್ತಾರೆ ಮತ್ತು ಅವರನ್ನು ಕೂಟಗಳಿಗೆ ಕರೆದುಕೊಂಡು ಹೋಗುತ್ತಾರೆ. (ಧರ್ಮೋಪದೇಶಕಾಂಡ 6:6, 7) ಆದರೆ ಪ್ರತಿಯೊಂದು ಮಗು ಬೆಳೆದು ದೊಡ್ಡವನಾದ/ಳಾದ ಮೇಲೆ ಅಪ್ಪಅಮ್ಮ ನಂಬುವುದನ್ನು ತಾನು ನಂಬಬೇಕಾ ಬೇಡವಾ ಅನ್ನೋದನ್ನು ತೀರ್ಮಾನ ಮಾಡುತ್ತಾನೆ.

 ಯೆಹೋವನ ಸಾಕ್ಷಿಗಳು ಎಳೇ ಮಗುವಿಗೆ ದೀಕ್ಷಾಸ್ನಾನ ಮಾಡಿಸುತ್ತಾರಾ?

 ಇಲ್ಲ. ಎಳೇ ಮಗುವಿಗೆ ದೀಕ್ಷಾಸ್ನಾನ ಕೊಡುವುದನ್ನು ಬೈಬಲ್‌ ಒಪ್ಪಲ್ಲ. ಒಂದನೇ ಶತಮಾನದ ಕ್ರೈಸ್ತರು ದೀಕ್ಷಾಸ್ನಾನ ತಗೊಳ್ಳುವುದಕ್ಕೆ ಮುಂಚೆ ಅವರು ಕೇಳಿಸಿಕೊಂಡ ವಿಷಯವನ್ನು ಸಂತೋಷದಿಂದ ಒಪ್ಪಿಕೊಂಡರು, ಪಶ್ಚಾತ್ತಾಪಪಟ್ಟರು. (ಅಪೊಸ್ತಲರ ಕಾರ್ಯ 2:14, 22, 38, 41) ಇದರಿಂದ ಏನು ಗೊತ್ತಾಗುತ್ತಂದ್ರೆ, ಬೈಬಲ್‌ ಏನು ಕಲಿಸುತ್ತೆ ಅಂತ ಅರ್ಥಮಾಡಿಕೊಳ್ಳುವಷ್ಟು ಬುದ್ಧಿ ಬಂದ ಮೇಲೆ ಮತ್ತು ಕಲಿತಿರುವುದನ್ನು ನಂಬಿ ಅದರ ಪ್ರಕಾರ ಜೀವಿಸಲಿಕ್ಕೆ ತೀರ್ಮಾನ ಮಾಡಿದ ಮೇಲೆ ಮಾತ್ರ ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆಯಲಿಕ್ಕೆ ಆಗುತ್ತದೆ. ಇದನ್ನೆಲ್ಲ ಎಳೇ ಮಗು ಮಾಡಲು ಆಗುವುದಿಲ್ಲ.

 ಮಕ್ಕಳು ದೊಡ್ಡವರಾದ ಮೇಲೆ ದೀಕ್ಷಾಸ್ನಾನ ಪಡೆಯಲು ಅವರೇ ನಿರ್ಣಯ ಮಾಡಬಹುದು. ಆದರೆ ದೀಕ್ಷಾಸ್ನಾನ ಪಡೆದ ಮೇಲೆ ಏನೇನು ಜವಾಬ್ದಾರಿ ಬರುತ್ತೆ ಎಂದು ಅವರು ಮೊದಲು ಅರ್ಥಮಾಡಿಕೊಳ್ಳಬೇಕು.

 ಮಕ್ಕಳು ದೀಕ್ಷಾಸ್ನಾನ ಪಡೆಯಲಿಲ್ಲ ಅಂದ್ರೆ ಅವರನ್ನು ಯೆಹೋವನ ಸಾಕ್ಷಿಗಳು ದೂರ ಮಾಡುತ್ತಾರಾ?

 ಇಲ್ಲ. ತಾವು ನಂಬುವುದನ್ನೇ ಮಕ್ಕಳು ನಂಬಲ್ಲ ಅಂತ ಗೊತ್ತಾದಾಗ ಸಾಕ್ಷಿಗಳಾಗಿರುವ ಹೆತ್ತವರಿಗೆ ತುಂಬ ನೋವಾಗುತ್ತೆ ನಿಜ. ಹಾಗಂತ ಮಕ್ಕಳ ಜೊತೆ ಇರುವ ಸಂಬಂಧವನ್ನು ಅವರು ಕಡಿದು ಹಾಕುವುದಿಲ್ಲ. ಆಗಲೂ ಅವರು ಮಕ್ಕಳನ್ನು ಪ್ರೀತಿಸುತ್ತಾರೆ.

ದೊಡ್ಡವರಾಗಿರಲಿ ಚಿಕ್ಕವರಾಗಿರಲಿ ದೀಕ್ಷಾಸ್ನಾನ ತಗೊಳ್ಳಬೇಕಾ ಬೇಡವಾ ಅಂತ ಅವರೇ ತೀರ್ಮಾನ ಮಾಡಬೇಕು

 ಯೆಹೋವನ ಸಾಕ್ಷಿಗಳು ಮಕ್ಕಳನ್ನು ಕೂಡ ಯಾಕೆ ಸಾರಲಿಕ್ಕೆ ಕರೆದುಕೊಂಡು ಹೋಗುತ್ತಾರೆ?

 ಇದಕ್ಕೆ ತುಂಬ ಕಾರಣಗಳಿವೆ. a

  •   ದೇವರ ಬಗ್ಗೆ ಮಕ್ಕಳಿಗೆ ಕಲಿಸಬೇಕು ಮತ್ತು ಆತನನ್ನು ಆರಾಧಿಸಲು ತರಬೇತಿ ಕೊಡಬೇಕು ಎಂದು ಬೈಬಲ್‌ ಹೆತ್ತವರಿಗೆ ಹೇಳುತ್ತದೆ. (ಎಫೆಸ 6:4) ದೇವರ ಆರಾಧನೆಯಲ್ಲಿ ಮಾಡುವ ಒಂದು ಮುಖ್ಯವಾದ ವಿಷಯ ನಾವು ನಮ್ಮ ನಂಬಿಕೆಯ ಬಗ್ಗೆ ಬೇರೆಯವರಿಗೆ ಹೇಳುವುದೇ. ಹಾಗಾಗಿ ಹೆತ್ತವರು ದೇವರ ಬಗ್ಗೆ ಮಕ್ಕಳಿಗೆ ಕಲಿಸುವಾಗ ಸಾರುವುದು ಹೇಗೆ ಅಂತನೂ ಹೇಳಿಕೊಡುತ್ತಾರೆ.—ರೋಮನ್ನರಿಗೆ 10:9, 10; ಇಬ್ರಿಯ 13:15.

  •   ಯುವಕ ಯುವತಿಯರು ಯೆಹೋವನ ಹೆಸರನ್ನು ಕೊಂಡಾಡಲಿ ಎಂದು ಬೈಬಲ್‌ ಪ್ರೋತ್ಸಾಹಿಸುತ್ತದೆ. (ಕೀರ್ತನೆ 148:12, 13) ದೇವರನ್ನು ಕೊಂಡಾಡುವ ಮುಖ್ಯವಾದ ವಿಧ ಆತನ ಬಗ್ಗೆ ಬೇರೆಯವರ ಜೊತೆ ಮಾತಾಡುವುದೇ. b

  •   ಹೆತ್ತವರ ಜೊತೆ ಸಾರಲು ಹೋದಾಗ ಮಕ್ಕಳು ಒಳ್ಳೇ ವಿಷಯಗಳನ್ನು ಕಲಿಯುತ್ತಾರೆ. ಉದಾಹರಣೆಗೆ ಬೇರೆ ಬೇರೆ ಜನರ ಹತ್ತಿರ ಹೇಗೆ ಮಾತಾಡಬೇಕು ಅಂತ ಕಲಿಯುತ್ತಾರೆ. ಅನುಕಂಪ, ದಯೆ, ಗೌರವ, ನಿಸ್ವಾರ್ಥ ಗುಣ ಹೀಗೆ ಎಷ್ಟೋ ಅಮೂಲ್ಯ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ಅಲ್ಲದೆ, ಅವರ ನಂಬಿಕೆಗಳಿಗೆಲ್ಲ ಬೈಬಲಿನಲ್ಲಿ ಆಧಾರ ಇದೆ ಅಂತ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ.

 ಯೆಹೋವನ ಸಾಕ್ಷಿಗಳು ಹಬ್ಬ ಅಥವಾ ಬೇರೆ ಆಚರಣೆಗಳನ್ನು ಮಾಡುತ್ತಾರಾ?

 ದೇವರಿಗೆ ನೋವು ಮಾಡುವ ಯಾವ ಹಬ್ಬವನ್ನಾಗಲಿ ಆಚರಣೆಗಳನ್ನಾಗಲಿ ಯೆಹೋವನ ಸಾಕ್ಷಿಗಳು ಮಾಡುವುದಿಲ್ಲ. c (2 ಕೊರಿಂಥ 6:14-17; ಎಫೆಸ 5:10) ಹುಟ್ಟುಹಬ್ಬ, ಕ್ರಿಸ್‌ಮಸ್‌ ಈ ತರ ಬೈಬಲಲ್ಲಿ ಇಲ್ಲದಿರುವ ಹಬ್ಬ, ಆಚರಣೆಗಳನ್ನು ನಾವು ಮಾಡುವುದಿಲ್ಲ.

 ಆದರೆ ಕುಟುಂಬದವರ ಜೊತೆ ಸಮಯ ಕಳೆಯಲು ಮತ್ತು ಮಕ್ಕಳಿಗೆ ಧಾರಾಳವಾಗಿ ಗಿಫ್ಟ್‌ಗಳನ್ನು ಕೊಡಲು ನಾವು ತುಂಬ ಇಷ್ಟಪಡುತ್ತೇವೆ. ಗಿಫ್ಟ್‌ ಕೊಡಲಿಕ್ಕೆ, ಫ್ಯಾಮಿಲಿ ಪಾರ್ಟಿ ಮಾಡಲಿಕ್ಕೆ ಅವರು ಕ್ಯಾಲೆಂಡರಲ್ಲಿರುವ ರಜಾ ದಿನಗಳ ತನಕ ಕಾಯುವುದಿಲ್ಲ. ವರ್ಷ ಪೂರ್ತಿ ಯಾವಾಗ ಬೇಕಾದರೂ ಅವರು ಇಡೀ ಕುಟುಂಬ ಸೇರಿ ಬಂದು ಪಾರ್ಟಿ ಮಾಡುತ್ತಾರೆ, ಗಿಫ್ಟ್‌ಗಳನ್ನೂ ಕೊಡುತ್ತಾರೆ.

ಮಕ್ಕಳಿಗೆ ಗಿಫ್ಟ್‌ ಕೊಡೋದಂದರೆ ಕ್ರೈಸ್ತ ಹೆತ್ತವರಿಗೆ ತುಂಬ ಇಷ್ಟ

a ಹೆಚ್ಚಾಗಿ ತಂದೆತಾಯಿ ಅಥವಾ ದೊಡ್ಡವರು ಇಲ್ಲದಿದ್ದರೆ ಮಕ್ಕಳು ಸಾರುವುದಕ್ಕೆ ಹೋಗಲ್ಲ.

b ತಮ್ಮ ನಂಬಿಕೆಯ ಬಗ್ಗೆ ಬೇರೆಯವರ ಜೊತೆ ಮಾತಾಡಿ ದೇವರನ್ನು ಖುಷಿಪಡಿಸಿದ ಎಷ್ಟೋ ಮಕ್ಕಳ ಬಗ್ಗೆ ಬೈಬಲಲ್ಲಿ ಇದೆ.—2 ಅರಸು 5:1-3; ಮತ್ತಾಯ 21:15, 16; ಲೂಕ 2:42, 46, 47.

d ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.