ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷಕ್ಕೆ ಗುರಿಯಾಗುವವರು ಎಲ್ಲಾ ಕಡೆ ಇದ್ದಾರೆ

ದ್ವೇಷಕ್ಕೆ ಗುರಿಯಾಗುವವರು ಎಲ್ಲಾ ಕಡೆ ಇದ್ದಾರೆ

ಮನುಕುಲಕ್ಕೆ ದ್ವೇಷ ಅನ್ನೋದು ಒಂದು ಅಂಟುರೋಗದಂತೆ ಹರಡಿದೆ.

ಜನರು ಮೇಸೇಜಲ್ಲಿ, ಇಮೇಲಲ್ಲಿ ಅಥವಾ ಇಂಟರ್ನೆಟ್ಟಲ್ಲಿ ಕೆಲವು ಗುಂಪಿನ ಜನರ ಬಗ್ಗೆ ಅಥವಾ ಕೆಲವು ವ್ಯಕ್ತಿಗಳ ಬಗ್ಗೆ ದ್ವೇಷ ಕಾರುತ್ತಾರೆ. ಅಷ್ಟೇ ಅಲ್ಲ ದ್ವೇಷದಿಂದಾಗಿ ಹಲ್ಲೇನೂ ನಡೆಸ್ತಾರೆ. ಇದನ್ನ ನ್ಯೂಸ್‌ ಮತ್ತು ಸೋಶಿಯಲ್‌ ಮೀಡಿಯಾದಲ್ಲಿ ತೋರಿಸ್ತಾ ಇರ್ತಾರೆ. ಪೂರ್ವಾಭಿಪ್ರಾಯ, ಅಪಹಾಸ್ಯ, ನಿಂದನೆ, ಬೆದರಿಕೆ ಇವೆಲ್ಲ ಈಗ ಹೆಚ್ಚಾಗ್ತಾ ಹೋಗುತ್ತಿದೆ. ಹಾಗಾಗಿ ಮಾನವೀಯತೆ ಕಣ್ಮರೆಯಾಗಿದೆ ಮತ್ತು ದ್ವೇಷಕ್ಕೆ ಗುರಿಯಾಗುವವರು ಎಲ್ಲಾ ಕಡೆ ಇದ್ದಾರೆ.

ಈ ಸಂಚಿಕೆ ದ್ವೇಷ ಅನ್ನೋ ಸರಪಳಿಯನ್ನು ಮುರಿಯೋಕೆ ಆಗುತ್ತೆ ಅಂತ ತಿಳಿಸುತ್ತೆ. ಇದೊಂದು ಕನಸಲ್ಲ. ಇದು ಈಗಾಗ್ಲೇ ನಿಜ ಆಗಿದೆ. ಲೋಕವ್ಯಾಪಕವಾಗಿರೋ ಎಷ್ಟೋ ಜನ ಈ ಸರಪಳಿಯನ್ನು ಮುರಿದು ಹಾಕಿದ್ದಾರೆ.