ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಮ್ರಾಟ ಪೆಂಗ್ವಿನ್‌ನ ಸಮರ್ಥ ಗರಿ

ಸಾಮ್ರಾಟ ಪೆಂಗ್ವಿನ್‌ನ ಸಮರ್ಥ ಗರಿ

ವಿಕಾಸವೇ? ವಿನ್ಯಾಸವೇ?

ಸಾಮ್ರಾಟ ಪೆಂಗ್ವಿನ್‌ನ ಸಮರ್ಥ ಗರಿ

ಸಾಮ್ರಾಟ ಪೆಂಗ್ವಿನ್‌ ಅತಿ ವೇಗವಾಗಿ ನೀರಿನೊಳಗೆ ಈಜಿ ಅದೇ ವೇಗದಲ್ಲಿ ಮಂಜುಗಡ್ಡೆಯ ನೆಲದ ಮೇಲೆ ಚಲಿಸಬಲ್ಲದು. ಇದು ಹೇಗೆ ಸಾಧ್ಯ?

ಪರಿಗಣಿಸಿ: ತನ್ನ ಗರಿಗಳಲ್ಲಿ ಗಾಳಿಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಸಾಮ್ರಾಟ ಪೆಂಗ್ವಿನ್‌ಗೆ ಇದೆ. ಇದರಿಂದ ಪೆಂಗ್ವಿನ್‌ಗೆ ಅತಿಯಾದ ಶೀತದಿಂದ ರಕ್ಷಣೆ ಸಿಗುವುದಲ್ಲದೆ ಸಾಮಾನ್ಯವಾಗಿ ಚಲಿಸುವುದಕ್ಕಿಂತ ಎರಡು ಮೂರು ಪಟ್ಟು ವೇಗವಾಗಿ ಚಲಿಸುವ ಸಾಮರ್ಥ್ಯ ಸಿಗುತ್ತದೆ. ಹೇಗೆ? ಚಿಕ್ಕ ಚಿಕ್ಕ ಗಾಳಿಗುಳ್ಳೆಗಳನ್ನು ಪೆಂಗ್ವಿನ್‌ಗಳು ತಮ್ಮ ಗರಿಗಳ ಮಧ್ಯದಿಂದ ಹೊರಡಿಸುವುದರಿಂದ ಸಾಧ್ಯವಾಗಿದೆ ಎನ್ನುತ್ತಾರೆ ಸಮುದ್ರದ ಸಸ್ಯ-ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುವ ಪರಿಣತರು. ಈ ಗುಳ್ಳೆಗಳು ಪುಕ್ಕ ಪುಕ್ಕಗಳ ಮಧ್ಯೆ ಆಗುವ ತಿಕ್ಕಾಟವನ್ನು ಕಡಿಮೆಗೊಳಿಸುತ್ತೆ. ಇದರಿಂದ ವೇಗ ಹೆಚ್ಚುತ್ತೆ.

ಗಾಳಿಗುಳ್ಳೆಗಳನ್ನು ಹೊರಹಾಕುವ ಪೆಂಗ್ವಿನ್‌ನ ಪುಕ್ಕಗಳಲ್ಲಿರುವ ಈ ವಿಶೇಷತೆಯನ್ನು ಇಂದು ಇಂಜಿನೀಯರುಗಳು ಹಡಗಿಗೆ ಅಳವಡಿಸಿ, ಹಡಗು ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ. ಹೀಗೆ ನೀರಿಗೆ ಮತ್ತು ಹಡಗಿಗೆ ಆಗುವ ತಿಕ್ಕಾಟವನ್ನು ಕಡಿಮೆಗೊಳಿಸಿ ಹಡಗಿನ ವೇಗ ಹೆಚ್ಚಿಸುವ ಉಪಾಯದಲ್ಲಿದ್ದಾರೆ. ಆದರೆ ಸಾಮ್ರಾಟ ಪೆಂಗ್ವಿನ್‌ನ ಗರಿ-ಪುಕ್ಕಗಳ ವಿಶೇಷತೆ ಇರುವ ಒಂದು ಜರಡಿಯನ್ನು ನಿರ್ಮಿಸುವುದು ಮನುಷ್ಯನಿಗೆ ತುಂಬ ಕಷ್ಟ. ಇದೇ ನಮ್ಮ ಮುಂದಿರುವ ಸವಾಲು ಎಂದು ಒಪ್ಪಿಕೊಳ್ಳುತ್ತಾರೆ ಸಂಶೋಧಕರು.

ನೀವೇನು ನೆನಸುತ್ತೀರಿ? ಸಾಮ್ರಾಟ ಪೆಂಗ್ವಿನ್‌ನ ಪುಕ್ಕಗಳು ವಿಕಾಸವಾಗಿ ಬಂತೇ? ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನೇ? ◼ (g13-E 09)

[ಪುಟ 16ರಲ್ಲಿರುವ ಚಿತ್ರ]

[ಕೃ]

ಪೆಂಗ್ವಿನ್‌: Paul Nicklen/National Geographic Stock; ಗರಿ: Division of Vertebrate Zoology, courtesy of the Peabody Museum of Natural History, Yale University, New Haven, Connecticut, USA