ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಕಾಸವೇ? ವಿನ್ಯಾಸವೇ?

ಗಾಯ ಮಾಯ ಮಾನವ ದೇಹದ ಉಪಾಯ

ಗಾಯ ಮಾಯ ಮಾನವ ದೇಹದ ಉಪಾಯ

ಮಾನವ ದೇಹದಲ್ಲಿ ಅನೇಕ ಪ್ರಕ್ರಿಯೆಗಳು ನಡೆಯುತ್ತವೆ. ಇವುಗಳಲ್ಲಿ ಗಾಯ ಗುಣವಾಗಿ ಹಾನಿಗೊಳಗಾದ ಜಾಗದಲ್ಲಿ ಹೊಸ ಜೀವಕೋಶಗಳು ಉತ್ಪತ್ತಿಯಾಗುವ ಪ್ರಕ್ರಿಯೆಯೂ ಒಂದು. ಈ ಪ್ರಕ್ರಿಯೆ ಗಾಯವಾದ ತಕ್ಷಣ ಶುರುವಾಗುತ್ತದೆ.

ಪರಿಗಣಿಸಿ: ನಮ್ಮ ದೇಹದಲ್ಲಿರುವ ಜೀವಕೋಶಗಳು ಹಂತ ಹಂತವಾಗಿ ಗಾಯವನ್ನು ವಾಸಿಮಾಡುತ್ತವೆ:

  • ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳು ಗಾಯದ ಸುತ್ತಲೂ ಆವರಿಸಿ ರಕ್ತ ಹೆಪ್ಪುಗಟ್ಟಲು, ಹಾನಿಗೊಳಗಾದ ರಕ್ತನಾಳಗಳು ಮುಚ್ಚಿಕೊಳ್ಳಲು ಸಹಾಯಮಾಡುತ್ತವೆ.

  • ಗಾಯದ ಉರಿ-ಊತ ಸೋಂಕು ಹತ್ತದಂತೆ ರಕ್ಷಿಸುತ್ತದೆ. ಅಲ್ಲದೆ, ಗಾಯದ ಮೂಲಕ ಯಾವುದೇ ಕಸ ಅಥವಾ ರೋಗಾಣುಗಳು ದೇಹವನ್ನು ಸೇರದಂತೆ ತಡೆಯುತ್ತದೆ.

  • ಕೆಲವು ದಿನಗಳೊಳಗೆ ಗಾಯವಾದ ಜಾಗದಲ್ಲಿ ಹೊಸ ಜೀವಕೋಶಗಳು ಬಂದು ಗಾಯ ಮುಚ್ಚಿಕೊಳ್ಳುತ್ತದೆ, ಹಾನಿಗೊಳಗಾದ ರಕ್ತನಾಳಗಳು ಸರಿಯಾಗುತ್ತವೆ.

  • ಕೊನೆಯದಾಗಿ, ಗಾಯದ ಕಲೆ ಹೋಗಿ ಚರ್ಮ ಮಾಮೂಲಿ ಸ್ಥಿತಿಗೆ ಬರುತ್ತದೆ.

ರಕ್ತ ಹೆಪ್ಪುಗಟ್ಟುವ ಈ ಪ್ರಕ್ರಿಯೆಯನ್ನು ನೋಡಿ ಸಂಶೋಧಕರು ಒಂದು ವಿಶೇಷ ರೀತಿಯ ಪ್ಲ್ಯಾಸ್ಟಿಕನ್ನು ತಯಾರಿಸುತ್ತಿದ್ದಾರೆ. ಆ ಪ್ಲ್ಯಾಸ್ಟಿಕ್‍ಗೆ ಏನೇ ಹಾನಿಯಾದರೂ ಅದು ತನ್ನಿಂದ ತಾನೇ ಸರಿಯಾಗುತ್ತದೆ. ಆ ಪ್ಲ್ಯಾಸ್ಟಿಕ್‍ನಲ್ಲಿ ಎರಡು ನಾಳಗಳಿದ್ದು, ಅವುಗಳಲ್ಲಿ ಎರಡು ರೀತಿಯ ರಾಸಾಯನಿಕ ವಸ್ತುಗಳಿರುತ್ತವೆ. ಪ್ಲ್ಯಾಸ್ಟಿಕ್‍ಗೆ ಹಾನಿಯಾದಾಗ ಆ ನಾಳಗಳಿಂದ ರಾಸಾಯನಿಕ ವಸ್ತುಗಳು ಹೊರಬಂದು ಒಂದೊಕ್ಕೊಂದು ಬೆರೆಯುತ್ತವೆ. ಹಾಗೆ ಬೆರೆತು ಪ್ಲ್ಯಾಸ್ಟಿಕ್‍ನಲ್ಲಿನ ಹಾನಿಯಾದ ಜಾಗವನ್ನು ಮುಚ್ಚಿ, ನಂತರ ಗಟ್ಟಿಯಾಗುತ್ತವೆ. ಸಂಶೋಧಕನೊಬ್ಬ ಒಪ್ಪಿಕೊಳ್ಳುವುದು, ತಾವು ತಯಾರಿಸುತ್ತಿರುವ ತನ್ನಿಂದ ತಾನೇ ಗುಣವಾಗುವ ಈ ಕೃತಕ ಪ್ರಕ್ರಿಯೆಯು, ಈಗಾಗಲೇ ನಿಸರ್ಗದಲ್ಲಿ ಕಂಡುಬರುವ ಪ್ರಕ್ರಿಯೆಯ “ತದ್ರೂಪವಾಗಿದೆ.”

ನೀವೇನು ನೆನಸುತ್ತೀರಿ? ಮಾನವ ದೇಹದ ಗಾಯ ಗುಣವಾಗುವ ಈ ಪ್ರಕ್ರಿಯೆ ವಿಕಾಸದಿಂದ ಬಂತಾ? ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನಾ? ▪ (g15-E 12)