ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 31

ನಾವು ಯೆಹೋವನ ಸಾಕ್ಷಿಗಳು!

ನಾವು ಯೆಹೋವನ ಸಾಕ್ಷಿಗಳು!

(ಯೆಶಾಯ 43:​10-12)

1. ಮರ, ಶಿಲೆ ನಿರ್ಮಿತ

ದೇವತೆಗಳನೇಕ.

ಸತ್ಯದೇವ ಶಕ್ತ,

ಕಾರ್ಯದಿ ವ್ಯಕ್ತ.

ದೇವತೆಗಳಿಗಿಲ್ಲ

ಕಾಲಜ್ಞಾನ ಸಾಮರ್ಥ್ಯ.

ಸಾಕ್ಷಿಗಳು ಇಲ್ಲ ಅವಕ್ಕೆ,

ಅವುಗಳ ದೇವತ್ವಕ್ಕೆ.

(ಪಲ್ಲವಿ)

ನಾವು ಯೆಹೋವ ಸಾಕ್ಷಿ,

ಹೇಳುತ್ತೇವೆ ಧೈರ್ಯದಿ.

ಕಾಲಜ್ಞಾನಿ ನಮ್ಮ ಯೆಹೋವ,

ವಚನ ಪೂರೈಸುವ.

2. ದೇವನಾಮ ಘೋಷಣೆ

ಸಾಕ್ಷಿಯನು ನೀಡುತೆ.

ಸಾರಿ ರಾಜ್ಯವಾರ್ತೆ,

ತೋರಿ ಧೀರತೆ.

ಜನ ನೋಡುವರಾಗ

ವಿಮೋಚಕ ಸತ್ಯವ.

ಬಲವ ಹೊಂದಿ ಹಾಡುವರು,

ಜೊತೆಗೆ ಕೀರ್ತಿಸುವರು.

(ಪಲ್ಲವಿ)

ನಾವು ಯೆಹೋವ ಸಾಕ್ಷಿ,

ಹೇಳುತ್ತೇವೆ ಧೈರ್ಯದಿ.

ಕಾಲಜ್ಞಾನಿ ನಮ್ಮ ಯೆಹೋವ,

ವಚನ ಪೂರೈಸುವ.

3. ಸಾಕ್ಷಿ ಕಾರ್ಯ ನಾಮದ

ಕಳಂಕವ ತೆಗೆಯ.

ನೀಡುತೆ ದುಷ್ಟಗೆ

ಎಚ್ಚರಿಕೆಯ.

ಪಶ್ಚಾತ್ತಾಪಿಗಳಿಗೆ

ನೀಡುತ್ತದೆ ಕ್ಷಮೆಯ.

ತರುತ್ತದೆ ಶಾಂತಿ, ಆನಂದ,

ಕೊಡುತೆ ಜೀವ ಅನಂತ.

(ಪಲ್ಲವಿ)

ನಾವು ಯೆಹೋವ ಸಾಕ್ಷಿ,

ಹೇಳುತ್ತೇವೆ ಧೈರ್ಯದಿ.

ಕಾಲಜ್ಞಾನಿ ನಮ್ಮ ಯೆಹೋವ,

ವಚನ ಪೂರೈಸುವ.