ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಅಂತ್ಯ ಹತ್ತಿರವಿದೆಯಾ?

“ಅಂತ್ಯ”—ಅಂದರೇನು?

“ಅಂತ್ಯ”—ಅಂದರೇನು?

‘ಅಂತ್ಯ’ ಅನ್ನುವ ಪದ ಕೇಳಿದ ತಕ್ಷಣ ನಿಮ್ಮ ಮನಸ್ಸಿಗೆ ಏನು ಬರುತ್ತದೆ? ಆಕಾಶದಿಂದ ಒಂದು ಧೂಮಕೇತು ಬಂದು ಭೂಮಿಗೆ ಬಡಿದು ಎಲ್ಲಾ ನಾಶವಾಗುವ ದೃಶ್ಯಾನಾ? ಅಥವಾ ಯಾವುದಾದರೊಂದು ನೈಸರ್ಗಿಕ ವಿಪತ್ತಾ? ಇಲ್ಲವೆ ಮೂರನೇ ಮಹಾ ಯುದ್ಧಾನಾ? ಇವುಗಳನ್ನು ನೆನಸಿಕೊಂಡರೆನೇ ಕೆಲವರಿಗೆ ನಡುಕ ಶುರು ಆಗಬಹುದು. ಇನ್ನು ಕೆಲವರು ನಗಬಹುದು ಅಥವಾ ‘ಇದೆಲ್ಲಾ ನಿಜವಾಗಲೂ ಆಗುತ್ತಾ?’ ಅಂತ ಸಂಶಯ ಪಡಲೂಬಹುದು.

ಈ ವಿಷಯದ ಬಗ್ಗೆ ಜನರಿಗೆ ತುಂಬ ಗೊಂದಲ ಇದೆ. ಯಾಕೆಂದರೆ ಅವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಗೊತ್ತಿಲ್ಲ. ಆದರೆ ಸರಿಯಾದ ಮಾಹಿತಿ ಬೈಬಲ್‍ನಲ್ಲಿದೆ. ‘ಅಂತ್ಯ ಬರುತ್ತದೆ’ ಅಂತ ಅದು ಹೇಳುತ್ತದೆ. (ಮತ್ತಾಯ 24:14) ‘ಅಂತ್ಯವನ್ನು’ ಬೈಬಲಿನಲ್ಲಿ “ದೇವರ ಮಹಾ ದಿನ” ಅಥವಾ “ಹರ್ಮಗೆದೋನ್‌” ಎಂದೂ ಕರೆಯಲಾಗಿದೆ. (ಪ್ರಕಟನೆ 16:14, 16) ಅಷ್ಟೇ ಅಲ್ಲದೆ ಅಂತ್ಯ ಅಂದರೇನು, ಅದು ಏನಲ್ಲ ಮತ್ತು ಎಷ್ಟು ದೂರದಲ್ಲಿದೆ ಅಂತ ಸ್ಪಷ್ಟವಾಗಿ ಹೇಳುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ನಾವು ಅಂತ್ಯದಿಂದ ಪಾರಾಗಬೇಕೆಂದರೆ ಏನು ಮಾಡಬೇಕು ಅಂತನೂ ಹೇಳುತ್ತದೆ. ಮೊದಲಾಗಿ, ‘ಅಂತ್ಯ’ ಏನಾಗಿಲ್ಲ? ಬದಲಿಗೆ ಅದು ನಿಜವಾಗಿಯೂ ಏನಾಗಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ.

ಅಂತ್ಯ ಏನಲ್ಲ?

  1. ಇಡೀ ಭೂಮಿ ಬೆಂಕಿಯಿಂದ ಸುಟ್ಟು ಬೂದಿಯಾಗುವುದಲ್ಲ.

    ‘ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೇವರು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದಾನೆ’ ಎಂದು ಬೈಬಲ್‌ಹೇಳುತ್ತದೆ. (ಕೀರ್ತನೆ 104:5) ಈ ವಚನದಲ್ಲಿ ಮಾತ್ರವಲ್ಲ ಬೈಬಲಿನ ಇನ್ನೂ ಅನೇಕ ಕಡೆಗಳಲ್ಲಿ ತಿಳಿಸಿರುವ ಮಾತುಗಳು, ದೇವರು ಭೂಮಿಯನ್ನು ನಾಶ ಮಾಡುವುದೂ ಇಲ್ಲ, ನಾಶ ಮಾಡಲು ಬಿಡುವುದೂ ಇಲ್ಲ ಎಂಬ ಭರವಸೆಯನ್ನು ಕೊಡುತ್ತವೆ.—ಪ್ರಸಂಗಿ 1:4; ಯೆಶಾಯ 45:18.

  2. ಆಕಸ್ಮಿಕವಾಗಿ ಬರುವಂಥದ್ದಲ್ಲ.

    “ಆ ದಿನದ ಅಥವಾ ಗಳಿಗೆಯ ವಿಷಯವಾಗಿ ತಂದೆಗೆ (ದೇವರಿಗೆ) ಹೊರತು ಮತ್ತಾರಿಗೂ ತಿಳಿದಿಲ್ಲ; ಸ್ವರ್ಗದಲ್ಲಿರುವ ದೇವದೂತರಿಗಾಗಲಿ ಮಗನಿಗಾಗಲಿ ತಿಳಿದಿಲ್ಲ. ಆ ನೇಮಿತ ಸಮಯವು ಯಾವಾಗ ಎಂಬುದು ನಿಮಗೆ ತಿಳಿಯದ ಕಾರಣ ಅದಕ್ಕಾಗಿ ನೋಡುತ್ತಾ ಇರಿ, ಎಚ್ಚರವಾಗಿ ಇರಿ” ಎಂದು ಬೈಬಲ್‌ ಹೇಳುತ್ತದೆ. (ಮಾರ್ಕ 13:32, 33) ಆದ್ದರಿಂದ ಅಂತ್ಯ ಆಕಸ್ಮಿಕವಾಗಿ ಬರುವಂಥದ್ದಲ್ಲ, ಬದಲಿಗೆ ದೇವರು ಇದನ್ನು ತರಲು ಒಂದು ನಿರ್ದಿಷ್ಟ ಸಮಯವನ್ನು ನೇಮಿಸಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತದೆ.

  3. ಮಾನವರಿಂದ ಅಥವಾ ಆಕಾಶಕಾಯಗಳಿಂದ ಸರ್ವನಾಶವಾಗುವುದಲ್ಲ.

    ಅಂತ್ಯ ಹೇಗೆ ಬರುತ್ತದೆ? ಇದಕ್ಕೆ ಉತ್ತರ ಬೈಬಲಿನ ಪ್ರಕಟನೆ 19:11ರಲ್ಲಿದೆ. “ಸ್ವರ್ಗವು ತೆರೆದಿರುವುದನ್ನು ನಾನು ನೋಡಿದೆನು; ಇಗೋ, ಒಂದು ಬಿಳೀ ಕುದುರೆ. ಅದರ ಮೇಲೆ ಕುಳಿತುಕೊಂಡಿದ್ದವನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಡುತ್ತಾನೆ” ಎಂದು ಅಲ್ಲಿ ತಿಳಿಸಲಾಗಿದೆ. ಅದೇ ಅಧ್ಯಾಯದ 19ನೇ ವಚನದಲ್ಲಿ, “ಕಾಡುಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕುಳಿತುಕೊಂಡಿದ್ದವನೊಂದಿಗೂ ಅವನ ಸೈನ್ಯದೊಂದಿಗೂ ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ನಾನು ನೋಡಿದೆನು” ಎಂದು ತಿಳಿಸಲಾಗಿದೆ. (ಪ್ರಕಟನೆ 19:11-21) ಇಲ್ಲಿ ತಿಳಿಸಲಾದ ಬೈಬಲಿನ ಮಾತುಗಳಿಂದ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಅದೇನೆಂದರೆ, ದೇವರು ತನ್ನ ವೈರಿಗಳನ್ನು ನಾಶಮಾಡಲು ದೇವದೂತರ ಸೈನ್ಯವನ್ನು ಕಳುಹಿಸುತ್ತಾನೆ.

ಬೈಬಲ್‌ ತಿಳಿಸುವ ಅಂತ್ಯ ಒಂದು ಸಿಹಿ ಸುದ್ದಿಯಾಗಿದೆ

ಅಂತ್ಯ ಏನಾಗಿದೆ?

  1. ಮಾನವ ಸರಕಾರಗಳ ಅಂತ್ಯ.

    ‘ಕುದುರೆಯ ಮೇಲೆ ಕುಳಿತವನೊಂದಿಗೆ ಮತ್ತು ಅವನ ಸೈನ್ಯದೊಂದಿಗೆ ಯುದ್ಧಮಾಡುವುದಕ್ಕೆ “ಭೂರಾಜರೂ ಅವರ ಸೈನ್ಯಗಳೂ” ಕೂಡಿಬರುತ್ತವೆ ಎಂದು ಮೇಲಿನ 3ನೇ ಅಂಶದಲ್ಲಿ ತಿಳಿಸಲಾಗಿತ್ತು. ಆದರೆ “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು [ಸರಕಾರವನ್ನು] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು” ಎಂದು ಬೈಬಲ್‌ ಹೇಳುತ್ತದೆ. (ದಾನಿಯೇಲ 2:44) ಅಂದರೆ ‘ಭೂರಾಜರು ಮತ್ತು ಅವರ ಸೈನ್ಯಗಳು’ ಅಥವಾ ಮಾನವ ಸರಕಾರಗಳು ನಾಶವಾಗುವವು.—ಪ್ರಕಟನೆ 19:19.

  2. ಯುದ್ಧ, ಹಿಂಸೆ ಮತ್ತು ಅನ್ಯಾಯದ ಅಂತ್ಯ.

    ‘ದೇವರು ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುವನು.’ (ಕೀರ್ತನೆ 46:9) ಆಗ, “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.” (ಜ್ಞಾನೋಕ್ತಿ 2:21, 22) ಜೊತೆಗೆ ‘ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತೇನೆ’ ಎಂದು ದೇವರು ಮಾತು ಕೊಟ್ಟಿದ್ದಾನೆ.—ಪ್ರಕಟನೆ 21:4, 5.

  3. ದೇವರ ಬಗ್ಗೆ ತಪ್ಪಾಗಿ ಬೋಧಿಸುವ ಧರ್ಮಗಳ ಅಂತ್ಯ.

    ಈ ವಿಷಯದ ಬಗ್ಗೆ ಬೈಬಲ್‌ ಹೀಗೆ ಹೇಳುತ್ತದೆ: ‘ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ, ಯಾಜಕರು ಅವರಿಂದ ಅಧಿಕಾರ ಹೊಂದಿ ದೊರೆತನ ಮಾಡುತ್ತಾರೆ. ಅಂತ್ಯ ಬಂದಾಗ ನೀವು ಏನು ಮಾಡುವಿರಿ?’ (ಯೆರೆಮಿಾಯ 5:31) “ಆ ದಿನದಲ್ಲಿ ಅನೇಕರು ನನಗೆ, ‘ಕರ್ತನೇ, ಕರ್ತನೇ, ನಾವು ನಿನ್ನ ಹೆಸರಿನಲ್ಲಿ ಪ್ರವಾದಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಹೇಳುವರು. ಆದರೂ ಆಗ ನಾನು ಅವರಿಗೆ, ನನಗೆ ನಿಮ್ಮ ಪರಿಚಯವೇ ಇಲ್ಲ! ಅನ್ಯಾಯದ ಕೆಲಸಗಾರರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು” ಎಂದು ಯೇಸು ಹೇಳಿದ್ದಾನೆ. ಅದರರ್ಥ, ದೇವರ ಬಗ್ಗೆ ತಪ್ಪಾಗಿ ಬೋಧಿಸುವ ಧರ್ಮಗಳ ಅಂತ್ಯವಾಗಲಿದೆ.—ಮತ್ತಾಯ 7:21-23.

  4. ಕೆಟ್ಟ ಜನರ ಅಂತ್ಯ.

    “ಇದೇ ನ್ಯಾಯತೀರ್ಪಿಗೆ ಆಧಾರ: ಬೆಳಕು ಲೋಕಕ್ಕೆ ಬಂದಿದೆ, ಆದರೆ ಜನರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿಸಿದ್ದಾರೆ” ಎಂದು ಯೇಸು ಹೇಳಿದನು. (ಯೋಹಾನ 3:19) ನಂಬಿಗಸ್ತ ಪುರುಷನಾದ ನೋಹನ ಸಮಯದಲ್ಲಿ ಇಡೀ ಭೂಮಿಯಲ್ಲಿ ನಡೆದ ನಾಶದ ಬಗ್ಗೆ ವಿವರಿಸುತ್ತಾ ಬೈಬಲ್‌ಹೀಗೆ ಹೇಳುತ್ತದೆ: ‘ಆ ಕಾಲದ ಲೋಕವು ಜಲಪ್ರಳಯ ಬಂದಾಗ ನಾಶವಾಯಿತು. ಆದರೆ ಅದೇ ವಾಕ್ಯದ ಮೂಲಕ ಈಗ ಇರುವ ಆಕಾಶ ಮತ್ತು ಭೂಮಿಯು ಬೆಂಕಿಗಾಗಿ ಇಡಲ್ಪಟ್ಟಿದ್ದು, ನ್ಯಾಯತೀರ್ಪಿನ ದಿನಕ್ಕಾಗಿ ಮತ್ತು ದೇವಭಕ್ತಿಯಿಲ್ಲದ ಜನರ ನಾಶನಕ್ಕಾಗಿ ಕಾದಿರಿಸಲ್ಪಟ್ಟಿವೆ.’—2 ಪೇತ್ರ 3:5-7.

ಮುಂದೆ ಬರಲಿರುವ ‘ನ್ಯಾಯತೀರ್ಪಿನ ಮತ್ತು ನಾಶನದ ದಿನವನ್ನು’ ನೋಹನ ದಿನಗಳಲ್ಲಾದ ‘ಲೋಕದ’ ನಾಶನಕ್ಕೆ ಹೋಲಿಸಲಾಗಿದೆ ಎನ್ನುವುದನ್ನು ಗಮನಿಸಿ. ಇಲ್ಲಿ, ಲೋಕದ ನಾಶ ಅಂತ ಹೇಳಿರುವುದು ಭೂಮಿಯ ನಾಶದ ಬಗ್ಗೆಯಲ್ಲ, ಬದಲಿಗೆ ದೇವರ ವೈರಿಗಳಾದ ‘ದೇವಭಕ್ತಿಯಿಲ್ಲದ ಜನರ ನಾಶನದ ಬಗ್ಗೆಯೇ.’ ಅದೇ ರೀತಿ, ಮುಂದೆ ಬರಲಿರುವ ದೇವರ ‘ನ್ಯಾಯತೀರ್ಪಿನ ದಿನದಲ್ಲಿ’ ದೇವರ ವೈರಿಗಳು ನಾಶವಾಗುವರು. ಆದರೆ ನೋಹ ಮತ್ತು ಆತನ ಕುಟುಂಬ ಕಾಪಾಡಲ್ಪಟ್ಟಂತೆ ನ್ಯಾಯವಾಗಿ ನಡೆದುಕೊಳ್ಳುವ ದೇವಭಕ್ತರು ಕಾಪಾಡಲ್ಪಡುವರು.—ಮತ್ತಾಯ 24:37-42.

ಸ್ವಲ್ಪ ಊಹಿಸಿ ನೋಡಿ, ಕೆಟ್ಟವರನ್ನೆಲ್ಲಾ ನಾಶ ಮಾಡಿದ ನಂತರ ಈ ಭೂಮಿ ಎಷ್ಟು ಚೆನ್ನಾಗಿರಬಹುದಲ್ವಾ! ಹಾಗಾಗಿ, ಅಂತ್ಯಕ್ಕೆ ನಾವು ಭಯಪಡುವ ಅಗತ್ಯ ಇಲ್ಲ. ಯಾಕೆಂದರೆ ಬೈಬಲ್‌ ತಿಳಿಸುವ ಅಂತ್ಯ ಒಂದು ಸಿಹಿ ಸುದ್ದಿಯಾಗಿದೆ. ಆದರೆ ಈ ಪ್ರಶ್ನೆಗಳು ನಿಮ್ಮ ಮನಸ್ಸಿಗೆ ಬರಬಹುದು: ‘ಈ ಅಂತ್ಯ ಯಾವಾಗ ಬರುತ್ತದೆ ಎಂದು ಬೈಬಲ್‌ ಹೇಳುತ್ತದಾ? ಅದು ತುಂಬ ಹತ್ತಿರ ಇದೆಯಾ ಅಥವಾ ದೂರ ಇದೆಯಾ? ಅದರಿಂದ ಬದುಕಿ ಉಳಿಯಬೇಕಾದರೆ ನಾನು ಏನು ಮಾಡಬೇಕು?’ ಈ ಪ್ರಶ್ನೆಗಳಿಗೆ ಉತ್ತರ ಮುಂದಿನ ಲೇಖನದಲ್ಲಿದೆ. (w15-E 05/01)