ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಭೂಮಿಯನ್ನು ಸಂರಕ್ಷಿಸುವುದು ಯಾರು?

ಈ ಭೂಮಿಯನ್ನು ಸಂರಕ್ಷಿಸುವುದು ಯಾರು?

 ಜನ ಈ ಭೂಮಿಯನ್ನು ತುಂಬ ಹಾಳು ಮಾಡುತ್ತಿದ್ದಾರೆ. ಇದ್ರಿಂದ ಭೂಮಿಯ ಮೇಲಿರುವ ಮನುಷ್ಯರಿಗೆ ಪ್ರಾಣಿಪಕ್ಷಿಗಳಿಗೆ ಪರಿಸರಕ್ಕೆ ತುಂಬ ಹಾನಿ ಆಗುತ್ತಿದೆ. ಇದನ್ನು ನೋಡಿ, ‘ಇನ್ನೇನು ಹಾಳುಮಾಡ್ತಾರೋ’ ಅನ್ನೋ ಚಿಂತೆ ಅನೇಕರಿಗೆ ಇದೆ. ಹಿಂದೆಗಿಂತಲೂ ಇವತ್ತು ಮನುಷ್ಯರಿಂದ ಭೂಮಿ ಎಷ್ಟರ ಮಟ್ಟಿಗೆ ಹಾಳಾಗಿ ಹೋಗಿದೆಯೆಂದರೆ ಅನೇಕ ಜೀವಜಾತಿಗಳು ಅಳಿವಿನ ಅಂಚಿಗೆ ಬಂದಿವೆ, ವಿವಿಧ ಜೀವಿಗಳು ನಾಶವಾಗಿವೆ ಎಂದು ಕೆಲವು ಪರಿಸರ ತಜ್ಞರು ಹೇಳುತ್ತಾರೆ.

 ಮನುಷ್ಯರು ಈ ಭೂಮಿಯನ್ನು ಪೂರ್ತಿ ನಾಶ ಮಾಡಿಬಿಡುತ್ತಾರಾ? ಪರಿಸರಕ್ಕೆ ಏನೂ ಹಾನಿ ಆಗದೇ ಇರುವ ರೀತಿಯಲ್ಲಿ ಜೀವನ ಮಾಡಲು ಅವರಿಂದ ಆಗುತ್ತದಾ?

ಜನರ ಪ್ರಯತ್ನಗಳು ಯಶಸ್ವಿ ಕಾಣುತ್ತವಾ?

 ಪರಿಸರಕ್ಕೆ ಹಾನಿಯಾಗದೇ ಇರುವ ಹಾಗೆ ಜೀವಿಸಿ ಭೂಮಿಯನ್ನು ಕಾಪಾಡಲು ನಮಗೆ ಖಂಡಿತ ಆಗುತ್ತದೆಂದು ಅನೇಕ ತಜ್ಞರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಮಾಡುವ ಪ್ರಯತ್ನಗಳು ಯಶಸ್ವಿ ಆಗಬೇಕಾದರೆ ಒಂದೇ ಸಮಯದಲ್ಲಿ ಬೇರೆ ಬೇರೆ ಬದಲಾವಣೆಗಳನ್ನು ಮಾಡಬೇಕು ಅನ್ನೋದು ಕೆಲವು ಸಂಶೋಧಕರ ವಾದ. ಕೆಲವು ಬದಲಾವಣೆಗಳು ಯಾವುದೆಂದ್ರೆ,

  •   ಕಾಡುಗಳನ್ನು ಉಳಿಸಿ ಬೆಳೆಸಬೇಕು, ನೆಲ, ನೀರಾವರಿ ಭೂಮಿ ಮತ್ತು ಸಾಗರಗಳನ್ನು ಸಂರಕ್ಷಿಸಬೇಕು.

  •   ವಿವಿಧ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಶಕ್ತಿಯ ಮೂಲಗಳನ್ನು ಬಳಸಿಕೊಳ್ಳಬೇಕು.

  •   ಜನರು ಹೆಚ್ಚಾಗಿ ಹಣ್ಣುತರಕಾರಿಗಳನ್ನು ತಿಂದು ಮೀನು, ಮಾಂಸವನ್ನು ಮಿತವಾಗಿ ಸೇವಿಸುವ ಹಾಗೆ ಆಹಾರ ಉತ್ಪಾದನೆ ಹಾಗೂ ವಿತರಣೆಯಲ್ಲಿ ಬದಲಾವಣೆ ಮಾಡಬೇಕು. ಇದರಿಂದ ತಿನ್ನುವುದು ಕಡಿಮೆ ಆಗುತ್ತದೆ, ಆಹಾರವನ್ನು ಬೇಕಾಬಿಟ್ಟಿಯಾಗಿ ಹಾಳುಮಾಡುವುದು ಕೂಡ ಕಡಿಮೆ ಆಗುತ್ತದೆ.

  •   ಯಾವಾಗಲೂ ಜಾಸ್ತಿ ಸಾಮಾನು ವಸ್ತುಗಳು ಇದ್ರೆನೇ ಜೀವನದಲ್ಲಿ ಖುಷಿಯಾಗಿ ಇರಲಿಕ್ಕೆ ಆಗುತ್ತೆ ಎಂದು ನೆನಸಬಾರದು.

 ನಿಮಗೇನು ಅನಿಸುತ್ತದೆ? ಆ ಬದಲಾವಣೆಗಳನ್ನು ಮಾಡಲು ಈಗ ಸರ್ಕಾರಗಳು, ವ್ಯಾಪಾರಿ ಉದ್ಯಮಿಗಳು, ಜನರು ಕೈಜೋಡಿಸುತ್ತಾರಾ? ಇದೆಲ್ಲಾ ಆಗುವ ವಿಷಯ ಎಂದು ನೆನಸುತ್ತೀರಾ? ಅಥವಾ ನಾಳೆಯ ಬಗ್ಗೆ ಯೋಚಿಸದ ದುರಾಸೆ ಸ್ವಾರ್ಥ ಜನ ಹೆಚ್ಚಾಗಿ ಇರುವುದರಿಂದ ಆ ಬದಲಾವಣೆಗಳನ್ನು ಮಾಡೋದು ಕಷ್ಟ ಎಂದು ನೆನಸುತ್ತೀರಾ?—2 ತಿಮೊತಿ 3:1-5.

ಭೂಮಿಯ ಸುರಕ್ಷತೆಗೆ ನಿರೀಕ್ಷೆ

 ನಮ್ಮ ಈ ಭೂಮಿ ನಾಶವಾಗದೆ ಸುರಕ್ಷಿತವಾಗಿರುತ್ತದೆ ಎಂದು ಬೈಬಲ್‌ ಹೇಳುತ್ತದೆ. ಭೂಮಿಯನ್ನು ಕಾಪಾಡಲು ಮನುಷ್ಯರು ಮಾತ್ರ ಪ್ರಯತ್ನಪಟ್ಟರೆ ಸಾಕಾಗಲ್ಲ ಎಂದು, ಅದಕ್ಕಾಗಿ ನಿಜವಾಗಲೂ ಏನು ಬದಲಾಗಬೇಕು ಎಂದು ಬೈಬಲ್‌ ವಿವರಿಸುತ್ತದೆ. ಮುಂದೆ ಏನೆಲ್ಲ ಬದಲಾವಣೆ ಆಗುತ್ತದೆ ಎಂದು ಸಹ ಬೈಬಲಲ್ಲಿ ಇದೆ.

 ಭೂಮಿಯನ್ನು ಕಾಪಾಡಲು ಮನುಷ್ಯರು ಮಾತ್ರ ಪ್ರಯತ್ನಪಟ್ಟರೆ ಸಾಕಾಗಲ್ಲ ಏಕೆ? ಈ ಭೂಮಿಯನ್ನು ಸೃಷ್ಟಿ ಮಾಡಿದ್ದು ಯೆಹೋವ a ದೇವರು. ಭೂಮಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆತನು ಮನುಷ್ಯರಿಗೆ ಕೊಟ್ಟನು. (ಆದಿಕಾಂಡ 1:28; 2:15) ಅವರು ಈ ಕೆಲಸವನ್ನು ಚೆನ್ನಾಗಿ ಮಾಡಬೇಕಾದರೆ ಸೃಷ್ಟಿಕರ್ತನಾದ ದೇವರ ಮಾರ್ಗದರ್ಶನ ಕೇಳಬೇಕಿತ್ತು ಮತ್ತು ಅದನ್ನು ಪಾಲಿಸಬೇಕಿತ್ತು. (ಜ್ಞಾನೋಕ್ತಿ 20:24) ಆದರೆ ಅವರು ಹಾಗೆ ಮಾಡಲಿಲ್ಲ. ‘ಯೆಹೋವನು ನಮಗೆ ಬೇಡ, ನಮ್ಮ ಜೀವನ ನಾವೇ ನೋಡ್ಕೊಳ್ತೀವಿ’ ಎಂದು ತೀರ್ಮಾನ ಮಾಡಿದರು. (ಪ್ರಸಂಗಿ 7:29) ಭೂಮಿಯನ್ನು ನೋಡಿಕೊಳ್ಳುವ ಸಾಮರ್ಥ್ಯ ಮನುಷ್ಯರಿಗೆ ಇಲ್ಲ, ಚಿಕ್ಕಪುಟ್ಟ ಸುಧಾರಣೆ ಮಾಡಿದರೂ ಅದು ಪೂರ್ತಿ ಯಶ್ವಸ್ಸು ಕಾಣಲ್ಲ.—ಜ್ಞಾನೋಕ್ತಿ 21:30; ಯೆರೆಮೀಯ 10:23.

 ಏನು ಬದಲಾಗಬೇಕು? ಈ ಭೂಮಿಯನ್ನು ಜನ ನಾಶಮಾಡದಂತೆ ದೇವರು ತಡೆಯುತ್ತಾನೆ. (ಪ್ರಕಟನೆ 11:18) ಈ ಭೂಗ್ರಹಕ್ಕೆ ಹಾನಿ ಮಾಡುತ್ತಿರುವ ಸರ್ಕಾರ ಸಂಘಸಂಸ್ಥೆಗಳನ್ನು ದೇವರು ಅಭಿವೃದ್ಧಿ ಮಾಡುವುದಿಲ್ಲ. ಅವುಗಳಿಗೆ ಬದಲಾಗಿ ಆತನೇ ಒಂದು ಸರ್ಕಾರವನ್ನು ಸ್ಥಾಪಿಸಿದ್ದಾನೆ. (ಪ್ರಕಟನೆ 21:1) ಅದಕ್ಕೇ ಯೆಹೋವನು “ನೋಡು, ನಾನು ಎಲ್ಲ ಹೊಸದಾಗಿ ಮಾಡ್ತೀನಿ” ಅನ್ನುತ್ತಾನೆ.—ಪ್ರಕಟನೆ 21:5.

 ಬದಲಾವಣೆ ಮಾಡುವುದು ಯಾರು? ಯೆಹೋವನು ಮಾನವ ಸರ್ಕಾರಗಳನ್ನು ತೆಗೆದುಹಾಕಿ ಅವುಗಳ ಸ್ಥಾನದಲ್ಲಿ ಸ್ವರ್ಗದ ಸರ್ಕಾರ ಇರುವ ಹಾಗೆ ಮಾಡುತ್ತಾನೆ. ಆ ಸರ್ಕಾರಕ್ಕೆ ದೇವರ ಆಳ್ವಿಕೆ ಎಂದು ಹೆಸರು. ಆ ಸರ್ಕಾರದ ನಾಯಕನಾದ ಯೇಸು ಕ್ರಿಸ್ತ ಈ ಭೂಮಿಯನ್ನು ಆಳಲಿದ್ದಾನೆ.—ದಾನಿಯೇಲ 2:44; ಮತ್ತಾಯ 6:10.

 ದೇವರ ಆಳ್ವಿಕೆಯಲ್ಲಿ ಪ್ರಜೆಗಳಿಗೆ ದೇವರ ನೀತಿಯ ಮಟ್ಟಗಳ ಪ್ರಕಾರ ಹೇಗೆ ಬದುಕಬೇಕೆಂದು ಕಲಿಸಲಾಗುತ್ತದೆ. ಸೃಷ್ಟಿಕರ್ತನು ಯಾರೆಂದು ತಿಳಿದುಕೊಂಡು, ಆತನ ಮಾರ್ಗದರ್ಶನ ಪಾಲಿಸುವಾಗ ಎಲ್ಲರೂ ಪರಿಸರ ಸ್ನೇಹಿಗಳಾಗಿ ಇರಲು ಆಗುತ್ತದೆ. (ಯೆಶಾಯ 11:9) ಪರಿಸರಕ್ಕೆ ಹಾನಿ ಮಾಡದೇ ಉತ್ತಮ ಗುಣಮಟ್ಟದ ಜೀವನ ನಡೆಸುವುದು ಹೇಗೆಂದು ಸಹ ದೇವರ ಆಳ್ವಿಕೆಯಲ್ಲಿ ಹೇಳಿಕೊಡಲಾಗುತ್ತದೆ ಎಂದು ಬೈಬಲ್‌ ವಿವರಿಸುತ್ತದೆ. ದೇವರ ಆಳ್ವಿಕೆ ಇದನ್ನೆಲ್ಲ ಮಾಡಲಿಕ್ಕಿದೆ:

 ಬೇಗನೆ ದೇವರ ಸರ್ಕಾರ ಈ ಬದಲಾವಣೆಗಳನ್ನು ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ, “ದೇವರ ಸರ್ಕಾರದ ಆಳ್ವಿಕೆ ಭೂಮಿಗೆ ಯಾವಾಗ ಬರುತ್ತೆ?” ಲೇಖನ ನೋಡಿ.

a ಯೆಹೋವ ಅನ್ನುವುದು ದೇವರ ಹೆಸರು.—ಕೀರ್ತನೆ 83:18.